ಬೆಂಗಳೂರು: ರೌಡಿಶೀಟರ್ ನನ್ನು ಅಟ್ಟಾಡಿಸಿ 20ಕ್ಕೂ ಹೆಚ್ಚು ಬಾರಿ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದ ಜನತಾ ಕಾಲೋನಿ ಬಳಿ ತಡರಾತ್ರಿ ನಡೆದಿದೆ.
ಸೂಲಿಬೆಲೆಯ ಖಲೀಂಉಲ್ಲಾಖಾನ್(35) ಕೊಲೆಯಾದ ರೌಡಿಶೀಟರ್. ಆತ ರಾತ್ರಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಅಪರಿಚಿತರ ಗುಂಪು ದಾಳಿ ಮಾಡಿದೆ. ಖಲೀಂನನ್ನು ಅಟ್ಟಾಡಿಸಿದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ದೇಹದ ಭಾಗಗಳಿಗೆ 20ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆಗೈದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತದೇಹವನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

