ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂದು ಸ್ಯಾಂಡಲ್ ವುಡ್ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್ ಬೇಸರ ವ್ಯಕ್ತಪಡಿಸಿದ್ದಾರೆ.
ನಟಿ ರಮ್ಯಾ ಕೂಡ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಿದ್ದರು. ಈಗ ನಿರ್ದೇಶಕ ಪ್ರೇಮ್ ಕೂಡ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ. ಚಿತ್ರರಂಗದಲ್ಲಿ ನಮ್ಮವರೇ ನಮ್ಮ ಕಾಲೆಳೆಯುತ್ತಾರೆ ಎಂದು ಹೇಳಿದ್ದಾರೆ.
‘ಕೆಡಿ’ ಚಿತ್ರದ ಟೀಸರ್ ಲಾಂಚಿಂಗ್ ವೇಳೆ ಮಾತನಾಡಿದ ಅವರು, ಬೇರೆ ಕಡೆ ನಮಗೆ ತುಂಬಾ ಬೆಂಬಲ ನೀಡುತ್ತಾರೆ. ಆದರೆ ಇಲ್ಲಿ ನಮ್ಮವರೇ ನಮ್ಮ ಕಾಲು ಎಳೆಯುತ್ತಾರೆ. ಅದು ನಿಲ್ಲಬೇಕು, ನಮ್ಮವರಿಗೆ ಸಪೋರ್ಟ್ ಮಾಡಬೇಕು ಎಂದು ಹೇಳಿದ್ದಾರೆ.