ಬೆಂಗಳೂರು : ಐಪಿಎಲ್ ಟ್ರೋಫಿ ಹಿಡಿದು ಆರ್ ಸಿಬಿ (RCB) ಆಟಗಾರರು ಬೆಂಗಳೂರಿಗೆ ಆಗಮಿಸಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಹೌದು. 18 ವರ್ಷದ ಬಳಿಕ ಐಪಿಎಲ್ ಟ್ರೋಫಿ ಗೆದ್ದಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದ ಆಟಗಾರರು ಮೊದಲ ಟ್ರೋಫಿ ಕೈಯಲ್ಲಿ ಹಿಡಿದು ಬೆಂಗಳೂರಿಗೆ ಆಗಮಿಸಿದ್ದಾರೆ.
ಅಹಮದಾಬಾದ್ ನಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಹೆಚ್ ಎ ಎಲ್ ಏರ್ ಪೋರ್ಟ್ ಗೆ ಆರ್ ಸಿಬಿ ತಂಡದ ಆಟಗಾರರು ಬಂದಿಳಿದಿದ್ದಾರೆ. ಎಲ್ಲಾ ಕಡೆ ಆರ್ ಸಿಬಿ, ಆರ್ ಸಿಬಿ ಎಂಬ ಜಯಘೋಷಗಳು ಮೊಳಗಿದೆ.
ಹೆಚ್ ಎ ಎಲ್ ಏರ್ ಪೋರ್ಟ್ ಗೆ ಆಗಮಿಸಿದ ಆರ್ ಸಿಬಿ ಆಟಗಾರರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಹೆಚ್ ಎ ಎನ್ ಏರ್ ಪೋರ್ಟ್ ನಿಂದ ಬಸ್ ಮೂಲಕವಾಗಿ ಆರ್ ಸಿಬಿ ಆಟಗಾರರು ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ವಿಧಾನಸೌಧದಲ್ಲಿ ಕೆಲವೇ ಹೊತ್ತಲ್ಲಿ ಆರ್ ಸಿಬಿ ಆಟಗಾರರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ.

