HomeKarnatakaBREAKING : ಬೆಂಗಳೂರಿನಲ್ಲಿ 'ಟೆಕ್ಕಿ' ಆತ್ಮಹತ್ಯೆ ಕೇಸ್ ; ಪ್ರಕರಣದ ತನಿಖೆಗೆ ಇನ್ಸ್ಪೆಕ್ಟರ್ ದರ್ಜೆಯ ಅಧಿಕಾರಿ...

BREAKING : ಬೆಂಗಳೂರಿನಲ್ಲಿ ‘ಟೆಕ್ಕಿ’ ಆತ್ಮಹತ್ಯೆ ಕೇಸ್ ; ಪ್ರಕರಣದ ತನಿಖೆಗೆ ಇನ್ಸ್ಪೆಕ್ಟರ್ ದರ್ಜೆಯ ಅಧಿಕಾರಿ ನೇಮಕ.!

ಬೆಂಗಳೂರು : ಬೆಂಗಳೂರಿನಲ್ಲಿ ಟೆಕ್ಕಿ ಆತ್ಮಹತ್ಯೆ ಪ್ರಕರಣದ ತನಿಖೆಗೆ ತನಿಖಾಧಿಕಾರಿ ನೇಮಕ ಮಾಡಲಾಗಿದೆ .

ಮಾರತಹಳ್ಳಿಯ ಇನ್ ಸ್ಪೆಕ್ಟರ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಇನ್ಸ್ಪೆ ಕ್ಟರ್ ದರ್ಜೆಯ ಅಧಿಕಾರಿ ನೇಮಿಸಿ ಅವರಿಗೆ ತನಿಖೆಯ ಹೊಣೆ ನೀಡಲಾಗಿದೆ. ಪ್ರಕರಣ ರಾಷ್ಟ್ರವ್ಯಾಪ್ತಿ ಚರ್ಚೆಯಾಗುತ್ತಿದ್ದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು: ಉತ್ತರ ಪ್ರದೇಶ ಮೂಲದ 34 ವರ್ಷದ ಟೆಕ್ಕಿಯೊಬ್ಬರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, 24 ಪುಟಗಳ ಡೆತ್ ನೋಟ್ ಮತ್ತು ಅವರು ಮಾಡಿದಂತಹ ವೀಡಿಯೊ ರೆಕಾರ್ಡಿಂಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೀಡಿಯೊದಲ್ಲಿ, ಟೆಕ್ಕಿ ಅತುಲ್ ಸುಭಾಷ್ ತನ್ನ ಹೆಂಡತಿಯ ಕಿರುಕುಳವು ತನ್ನನ್ನು ಹೇಗೆ ಆತ್ಮಹತ್ಯೆಗೆ ಪ್ರೇರೇಪಿಸಿತು ಎಂಬುದನ್ನು ವಿವರಿಸಿದ್ದಾರೆ.ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅತುಲ್ ಸುಭಾಷ್ (34) ನಗರದ ಮಂಜುನಾಥ್ ಲೇಔಟ್ ಪ್ರದೇಶದ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ . ಎಲ್ಲವನ್ನೂ ವಿವರಿಸುವ 84 ನಿಮಿಷಗಳ ವೀಡಿಯೊವನ್ನು ಮಾಡಿ ಸೂಸೈಡ್ ಮಾಡಿಕೊಂಡಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular