ಬೆಂಗಳೂರು: ರಾಜ್ಯದ ಹಲವು ಜೈಲುಗಳಲ್ಲಿ ತಪಾಸಣೆ ಕಾರ್ಯ ಮುಂದುವರೆದಿದೆ. ಅಧಿಕಾರಿಗಳು ಜೈಲುಗಳಲ್ಲಿ ತೀವ್ರ ತಪಾಸಣೆ ಕೈಗೊಂಡಿದ್ದು, ಜೈಲಿನ ಅಧಿಕಾರಿಗಳ ತಪಾಸಣೆಯ ವೇಳೆ ಮೊಬೈಲ್ ಗಳು, ಯು.ಎಸ್.ಬಿ. ಕೇಬಲ್, ಚಾರ್ಜರ್, ಸಿಮ್ ಕಾರ್ಡ್ ಪತ್ತೆಯಾಗಿವೆ.
ರಾಜ್ಯದ ಹಲವು ಜೈಲುಗಳಲ್ಲಿ ಅಧಿಕಾರಿಗಳು ಕಟ್ಟು ನಿಟ್ಟಿನ ತಪಾಸಣೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಆರು ಮೊಬೈಲ್, ಮೈಸೂರಿನಲ್ಲಿ ಗಾಂಜಾ ಪ್ಯಾಕೆಟ್, ಕಾರವಾರ ಜೈಲಿನಲ್ಲಿ 7 ಮೊಬೈಲ್ ಪತ್ತೆಯಾಗಿವೆ.
ಕಾರವಾರ ಜೈಲಿನಲ್ಲಿ ನಾಲ್ವರು ಸಜಾಬಂಧಿಗಳ ಗಲಾಟೆ ಬೆಳಕಿಗೆ ಬಂದಿದ್ದು, ಅವರನ್ನು ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿದೆ.

