HomeKarnatakaBREAKING : ಹನುಮಧ್ವಜ ತೆರವು ವಿವಾದ : ನಾಳೆ ನಡೆಯಬೇಕಿದ್ದ 'ಮಂಡ್ಯ ಬಂದ್' ವಾಪಸ್

BREAKING : ಹನುಮಧ್ವಜ ತೆರವು ವಿವಾದ : ನಾಳೆ ನಡೆಯಬೇಕಿದ್ದ ‘ಮಂಡ್ಯ ಬಂದ್’ ವಾಪಸ್

ಮಂಡ್ಯ : ನಾಳೆ ‘ಸಮಾನ ಮನಸ್ಕರ ವೇದಿಕೆ’ ಕರೆ ನೀಡಿದ್ದ ಮಂಡ್ಯ ಬಂದ್ ವಾಪಸ್ ಪಡೆಯಲಾಗಿದೆ. ಫೆ.9 ರಂದು ಬಜರಂಗದಳ ಕರೆ ನೀಡಿದ್ದ ಬಂದ್ ವಿರೋಧಿಸಿ ಸಮಾನ ಮನಸ್ಕರ ವೇದಿಕೆ’ ನಾಳೆ ಫೆ(7) ರಂದು ಬಂದ್ ಗೆ ಕರೆ ನೀಡಿತ್ತು.

ಮಂಡ್ಯ ತಾಲ್ಲೂಕು ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಫೆ.9 ರಂದು ಬಜರಂಗದಳ ಬಂದ್ ಗೆ ಕರೆ ನೀಡಿತ್ತು, ಇದನ್ನು ವಿರೋಧಿಸಿ ಸಮಾನ ಮನಸ್ಕರ ವೇದಿಕೆ’ ನಾಳೆ ಫೆ(7) ರಂದು ಬಂದ್ ಗೆ ಕರೆ ನೀಡಿತ್ತು. ಮಂಡ್ಯದ ಜಿಲ್ಲಾಡಳಿತ ಮನವಿ ಮೇರೆಗೆ ನಾಳೆ ಕರೆ ನೀಡಲಾಗಿದ್ದ ಬಂದ್ ವಾಪಸ್ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಏನಿದು ವಿವಾದ..?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಡ್ಯದ ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರದಲ್ಲಿ ಕಟ್ಟಲಾಗಿದ್ದ ಹನುಮ ಧ್ವಜವನ್ನು ಜಿಲ್ಲಾಡಳಿತ ತೆರವುಗೊಳಿಸಿದ ಬೆನ್ನಲ್ಲೇ ನಿಷೇಧಾಜ್ಞೆ ಉಲ್ಲಂಘಿಸಿ ಗ್ರಾಮಸ್ಥರು, ಹಿಂದೂಪರ ಸಂಘಟನೆ ಕಾರ್ಯಕರ್ತರ ಸಮ್ಮುಖದಲ್ಲಿ ಮಹಿಳೆಯರು ಏಣಿ ಮೂಲಕ ಧ್ವಜಸ್ತಂಭ ಹತ್ತಿ ಶ್ರೀರಾಮನ ಫ್ಲೆಕ್ಸ್ ಹಾಗೂ ಕೇಸರಿ ಧ್ವಜವನ್ನು ಕಟ್ಟಿದ್ದರು. ಅಲ್ಲದೇ ಕೇಸರಿ ಬಾವುಟಗಳನ್ನು ಹಿಡಿದು ಗ್ರಾಮಸ್ಥರು ಧ್ವಜಸ್ತಂಭದ ಬಳಿ ನೆರೆದಿದ್ದರು.

ಧ್ವಜಸ್ತಂಭದಲ್ಲಿ ಕಟ್ಟಿದ್ದ ಫ್ಲೆಕ್ಸ್ ಹಾಗೂ ದ್ವಜವನ್ನು ತೆರವುಗೊಳಿಸಲು ಮುಂದಾದ ಪೊಲಿಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.. ಈ ವೇಳೆ ಪೊಲೀಸರು ಹಾಗೂ ಯುವಕರ ನಡುವೆ ವಾಗ್ವಾದ ನಡೆದಿದ್ದು, ಯುವಕರನ್ನು ಚದುರಿಸಲು ಪೊಲೀಸರು ಮತ್ತೆ ಲಘು ಲಾಠಿ ಪ್ರಹಾರ ನಡೆಸಿದ್ದರು..ನಂತರ ವಿವಾದಿತ ಧ್ವಜ ಸ್ಥಂಭದ ಮೇಲೆ ಜಿಲ್ಲಾಡಳಿತ ತ್ರಿವಣ ಧ್ವಜ ಹಾರಿಸಿದೆ. ಎಸಿ ನೇತೃತ್ವದಲ್ಲಿ ಪೊಲೀಸರು ಭಾರತದ ತ್ರಿವಣ ಧ್ವಜವನ್ನು ಹಾರಿಸಿದ್ದರು. ನಂತರ ಪ್ರತಿಭಟನೆ ಮತ್ತಷ್ಟು ತಾರಕಕ್ಕೇರಿತ್ತು.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular