BREAKING : ಪತ್ನಿ, ಮಕ್ಕಳ ಮುಂದೆಯೇ ಗುಂಡಿಕ್ಕಿ ಶ್ರೀಲಂಕಾದ ಮಾಜಿ ಕ್ರಿಕೆಟಿಗನ ಬರ್ಬರ ಹತ್ಯೆ.!

ಶ್ರೀಲಂಕಾದ ಮಾಜಿ ಕ್ರಿಕೆಟಿಗ ಧಮ್ಮಿಕಾ ನಿರೋಶನಾ (41) ಅವರನ್ನು ಮಂಗಳವಾರ ರಾತ್ರಿ (ಜುಲೈ 16) ಗಾಲೆ ಜಿಲ್ಲೆಯ ಸಣ್ಣ ಪಟ್ಟಣವಾದ ಅಂಬಲಂಗೋಡದಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸ್ಥಳೀಯ ಪೊಲೀಸರ ಪ್ರಕಾರ, ನಿರೋಶನಾ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಇದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಆತನ ಮೇಲೆ ಗುಂಡು ಹಾರಿಸಿದ್ದಾನೆ. ಪೊಲೀಸರು ಇನ್ನೂ ಶಂಕಿತನನ್ನು ಬಂಧಿಸಿಲ್ಲ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಇನ್ನೂ ಕೂಡ ಕೊಲೆಗಾರನನ್ನು ಬಂಧಿಸಲಾಗಿಲ್ಲ.

ಬಲಗೈ ವೇಗದ ಬೌಲರ್ ಆಗಿದ್ದ ನಿರೋಶನಾ ಅವರು ತಮ್ಮ ಆಟದ ದಿನಗಳಲ್ಲಿ ಉದಯೋನ್ಮುಖ ಪ್ರತಿಭೆ ಎಂದು ಪರಿಗಣಿಸಲ್ಪಟ್ಟಿದ್ದರು.2001 ಮತ್ತು 2004 ರ ನಡುವೆ ಗಾಲೆ ಕ್ರಿಕೆಟ್ ಕ್ಲಬ್ಗಾಗಿ 12 ಪ್ರಥಮ ದರ್ಜೆ ಪಂದ್ಯಗಳು ಮತ್ತು 8 ಲಿಸ್ಟ್ ಎ ಪಂದ್ಯಗಳನ್ನು ಆಡಿದ ಅವರು 300 ಕ್ಕೂ ಹೆಚ್ಚು ರನ್ ಮತ್ತು 19 ವಿಕೆಟ್ಗಳನ್ನು ಪಡೆದರು. 2000ನೇ ಇಸವಿಯಲ್ಲಿ ಶ್ರೀಲಂಕಾ ಅಂಡರ್-19 ತಂಡಕ್ಕೆ ಪಾದಾರ್ಪಣೆ ಮಾಡಿದ ಅವರು ಎರಡು ವರ್ಷಗಳ ಕಾಲ ಅಂಡರ್-19 ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಆಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read