ಟೇಕಾಫ್ ಗೂ ಮುನ್ನ ಇಂಡಿಗೋ ವಿಮಾನದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಪೈಲಟ್ ಕೂಡಲೇ ಎಟಿಸಿಗೆ ‘ಮೇಡೇ’ ಕರೆ ಕಳುಹಿಸಿ ಅವಘಡ ತಪ್ಪಿಸಿದ್ದಾರೆ.
ಹೌದು,. ಅಹಮದಾಬಾದ್ನಿಂದ 60 ಜನರನ್ನು ಹೊತ್ತು ದಿಯುಗೆ ಹೊರಟಿದ್ದ ಇಂಡಿಗೋ ವಿಮಾನದ ಎರಡು ಎಂಜಿನ್ಗಳಲ್ಲಿ ಒಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ನಂತರ ಟೇಕ್ಆಫ್ ಸ್ಥಗಿತಗೊಳಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಟೇಕ್ಆಫ್ಗೆ ಕೆಲವೇ ಕ್ಷಣಗಳ ಮೊದಲು ಈ ಘಟನೆ ಬೆಳಕಿಗೆ ಬಂದಿದ್ದು, ಪೈಲಟ್ಗಳು ಕೂಡಲೇ ಪ್ರಯಾಣಿಕರನ್ನು ತಕ್ಷಣವೇ ಇಳಿಸುವಂತೆ ಸೂಚಿಸಿದರು.ವಿಮಾನವು ಟೇಕ್ ಆಫ್ ಆಗಲು ರನ್ವೇಯಿಂದ ಚಲಿಸಲು ಪ್ರಾರಂಭಿಸಿದಾಗ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪೈಲಟ್ ವಾಯು ಸಂಚಾರ ನಿಯಂತ್ರಣಕ್ಕೆ “ಮೇಡೇ” ಕರೆ ಕಳುಹಿಸಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಅಹಮದಾಬಾದ್ ವಿಮಾನ ನಿಲ್ದಾಣದಿಂದ ವಿಮಾನ ಹೊರಡುವ ಮುನ್ನ ATR76 ವಿಮಾನದ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. ತಾಂತ್ರಿಕ ದೋಷವನ್ನು ಕಂಡುಕೊಂಡ ಕೂಡಲೇ ಪೈಲಟ್ಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದರು ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.
ಜುಲೈ 23, 2025 ರಂದು ಅಹಮದಾಬಾದ್ನಿಂದ ಡಿಯುಗೆ ಕಾರ್ಯನಿರ್ವಹಿಸುತ್ತಿದ್ದ ಇಂಡಿಗೋ ವಿಮಾನ 6E 7966 ಟೇಕ್ ಆಫ್ ಆಗುವ ಸ್ವಲ್ಪ ಮೊದಲು ತಾಂತ್ರಿಕ ದೋಷದ ಸೂಚನೆ ಕಂಡುಬಂದಿದೆ. ಕೂಡಲೇ ಪೈಲಟ್ಗಳು ಅಧಿಕಾರಿಗಳಿಗೆ ಮಾಹಿತಿ ನೀಡಿ ವಿಮಾನವನ್ನು ಹಿಂತಿರುಗಿಸಿದರು. ಕಾರ್ಯಾಚರಣೆಯನ್ನು ಪುನರಾರಂಭಿಸುವ ಮೊದಲು ವಿಮಾನವು ಅಗತ್ಯ ತಪಾಸಣೆ ಮತ್ತು ನಿರ್ವಹಣೆಗೆ ಒಳಗಾಗುತ್ತದೆ,” ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.