ನಟ ರಿಷಬ್ ಶೆಟ್ಟಿ ಹೊಗಳುವ ಭಾಗದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕಾಂತಾರ ದೈವಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಕೇಸ್ ದಾಖಲಾಗಿದೆ.
ಕಾಂತಾರ ಸಿನಿಮಾದ ದೈವದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ನಟ ರಣವೀರ್ ಸಿಂಗ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಫೀಮೇಲ್ ಗೋಸ್ಟ್ ಎಂದು ಸಂಬೋಧಿಸಿರುವುದು ತುಳುನಾಡಿಗರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ವಕೀಲ ಪ್ರಶಾಂತ್ ಮೇತಲ್ ದೂರು ದಾಖಲಿಸಿದ್ದಾರೆ.
ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಾತನಾಡಿದ ಅವರು, ‘ಕಾಂತಾರ 1’ ಚಿತ್ರವನ್ನು ಥಿಯೇಟರ್ ನಲ್ಲಿ ನೋಡಿದೆ. ರಿಷಬ್ ಶೆಟ್ಟಿ ಅವರ ಅಭಿನಯ ನಿಜವಾಗಿಯೂ ಅದ್ಭುತವಾಗಿದೆ. ಹೆಣ್ಣು ದೈವ ನಿಮ್ಮ ಮೇಲೆ ಬರುತ್ತಲ್ಲ ಅದು ಅದ್ಭುತ. ನಿಮ್ಮ ನಟನೆ ಸೂಪರ್ ಎಂದು ರಣವೀರ್ ಸಿಂಗ್ ದೈವದ ಅನುಕರಣೆ ಮಾಡಿದ್ದಾರೆ. ಗುಳಿಗ ದೈವ, ಚಾಮುಂಡಿಗೆ ಅವಮಾನ ಮಾಡಿದ್ದಾರೆ.
ನಟ ರಣವೀರ್ ಸಿಂಗ್ ಕಾಂತಾರ ದೈವಕ್ಕೆ ಅವಮಾನ ಮಾಡಿದ್ದಾರೆ. ಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿ ಅವರನ್ನು ಹೊಗಳುವ ಭರದಲ್ಲಿ ರಣವೀರ್ ಸಿಂಗ್ ವಿವಾದ ಉಂಟು ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ನಂತರ ರಣವೀರ್ ಸಿಂಗ್ ಕ್ಷಮೆಕೂಡ ಯಾಚಿಸಿದ್ದರು.
