ಡಿಜಿಟಲ್ ಡೆಸ್ಕ್ : ಖ್ಯಾತ ಗಾಯಕ ಸೋನು ನಿಗಮ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಭಾನುವಾರ ಲೈವ್ ಪ್ರದರ್ಶನದ ಸಮಯದಲ್ಲಿ ಅವರು ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದರು. ತೀವ್ರ ಬೆನ್ನುನೋವಿನ ಹೊರತಾಗಿಯೂ ಅವರು ತಮ್ಮ ಪ್ರದರ್ಶನವನ್ನು ಮುಂದುವರಿಸಿದರು. ನೋವು ಉಲ್ಬಣಿವಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಂದರ್ಭದಲ್ಲಿ, ಅವರು ತಮ್ಮ ಆರೋಗ್ಯದ ಬಗ್ಗೆ ಮಾತನಾಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಸೋನು ನಿಗಮ್ ಇಲ್ಲಿಯವರೆಗೆ ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ.. ಅವರು ತಮ್ಮದೇ ಆದ ಬ್ಯಾಂಡ್ ಅನ್ನು ಸಹ ಹೊಂದಿದ್ದಾರೆ. ಸೋನು ನಿಗಮ್ ಆಸ್ಪತ್ರೆಯ ಹಾಸಿಗೆಯಿಂದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ಇದು ನನ್ನ ಜೀವನದ ಕಠಿಣ ದಿನ. ನಾನು ಹಾಡುಗಳನ್ನು ಹಾಡುತ್ತಾ ವೇದಿಕೆಯ ಸುತ್ತಲೂ ತಿರುಗಾಡುತ್ತಿದ್ದೆ. ನಂತರ ನೋವು ಬಂದಿತು. ಆದರೆ ಹೇಗೋ ಅದನ್ನು ನಿರ್ವಹಿಸಿದೆ. ಬೆನ್ನಿನಲ್ಲಿ ಸಾಕಷ್ಟು ನೋವು ಇತ್ತು. ಯಾರೋ ನನ್ನ ಬೆನ್ನಿಗೆ ಚುಚ್ಚುಮದ್ದಿನ ಸೂಜಿಯನ್ನು ಹಾಕಿದಂತೆ ಭಾಸವಾಯಿತು.” ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.