ಬೆಂಗಳೂರು: ಕುಡಿದ ಮತ್ತಿನಲ್ಲಿ ಕ್ಯಾಚ್ ಚಾಲಕನ ಮೇಲೆ ಯುವತಿಯರು ಹಲ್ಲೆ ಮಾಡಿದ್ದಾರೆ. ಬೆಂಗಳೂರಿನ ದೇವರ ಚಿಕ್ಕನಹಳ್ಳಿ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ.
ಜೆಸಿ ನಗರ ಮತ್ತು ಕೋರಮಂಗಲದ ಇಬ್ಬರು ಯುವತಿಯರು ಸ್ನೇಹಿತರ ಜೊತೆಗೆ ಖಾಸಗಿ ಹೋಟೆಲ್ ಗೆ ಬಂದಿದ್ದಾರೆ. ವಾಪಸ್ ಹೋಗುವಾಗ ಕ್ಯಾಬ್ ಚಾಲಕನ ಜೊತೆಗೆ ಕಿರಿಕ್ ಮಾಡಿದ್ದಾರೆ. ಹಿಂದಿನಿಂದ ಕ್ಯಾಬ್ ಗೆ ಬೈಕ್ ಡಿಕ್ಕಿ ಹೊಡೆಸಿದ್ದಾರೆ. ಈ ವೇಳೆ ಯುವತಿಯರನ್ನು ಕ್ಯಾಬ್ ಚಾಲಕ ಅಹ್ಮದ್ ಪ್ರಶ್ನಿಸಿದ್ದಾರೆ. ಆಗ ಕ್ಯಾಬ್ ಚಾಲಕನನ್ನು ನಿಂದಿಸಿ ಯುವತಿಯರು ಪರಾರಿಯಾಗಲೆತ್ನಿಸಿದ್ದಾರೆ.
ಎಸ್ಕೇಪ್ ಆಗುತ್ತಿದ್ದ ಯುವತಿಯರನ್ನು ಸ್ಥಳಿಯರು ತಡೆದಿದ್ದು, ಈ ವೇಳೆ ಕೈಗೆ ಚೈನ್ ಸುತ್ತಿಕೊಂಡು ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಅಸಭ್ಯ ಸನ್ನೆ ತೋರಿಸಿ ಕ್ಯಾಬ್ ಚಾಲಕನ ಮೇಲೆ ಹಲ್ಲೆ ಮಾಡಿ ನಿಂದಿಸಿದ ಆರೋಪ ಕೇಳಿ ಬಂದಿದೆ. ಇಬ್ಬರು ಯುವತಿಯರನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಇಬ್ಬರು ಯುವತಿಯರ ವಿರುದ್ಧ ಪ್ರಕರಣ ದಾಖಲಾಗಿದೆ.

