ಬೆಂಗಳೂರು: ಜನರು ಡಿ.ಕೆ. ಶಿವಕುಮಾರ್ ಅವರನ್ನು ಉನ್ನತ ಸ್ಥಾನದಲ್ಲಿ ನೋಡುವಂತಹ ಭಾಗ್ಯ ಸಿಗಲಿ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಬೆಜ್ಜವಳ್ಳಿ ಗ್ರಾಮದಲ್ಲಿ ಮಾತನಾಡಿದ ರಂಭಾಪುರಿ ಶ್ರೀಗಳು, ಕಾಂಗ್ರೆಸ್ ಗೆ ಹೆಚ್ಚು ಶಕ್ತಿ ತಂದು ಕೊಟ್ಟಿದ್ದು ಡಿ.ಕೆ. ಶಿವಕುಮಾರ್. ಅವರಿಗೆ ಉನ್ನತ ಸ್ಥಾನ ಸಿಗಬೇಕಿತ್ತು. ವರಿಷ್ಠರ ಸಮ್ಮುಖದಲ್ಲಿ ನಡೆದ ಮಾತಿನಂತೆ ಮುಂದೆ ಅವಕಾಶ ಕಲ್ಪಿಸಬೇಕು ಎಂದು ಡಿಕೆ ಮುಖ್ಯಮಂತ್ರಿ ಆಗಲಿ ಎಂದು ಪರೋಕ್ಷವಾಗಿ ಆಶೀರ್ವದಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಮುಂದೆ ಗಟ್ಟಿ ನಿರ್ಧಾರ ಕೈಗೊಳ್ಳಬಹುದೆಂಬ ನಂಬಿಕೆ ಇದೆ. ಅವರು ದೇವರು, ಧರ್ಮ, ಗುರುಗಳಲ್ಲಿ ಅಪಾರ ನಂಬಿಕೆ ಇಟ್ಟಿದ್ದಾರೆ. ಅವರ ಮಾತಿನಲ್ಲಿ ಲೌಕಿಕ ಹಾಗೂ ಆಧ್ಯಾತ್ಮದ ತಿರುಳು ಇದೆ. ಹಲವು ರಾಜಕಾರಣಿಗಳ ಬಾಯಲ್ಲಿ ಇಂತಹ ಮಾತು ಬರುವುದು ಕಷ್ಟ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.