ಬೆಂಗಳೂರು: ಎಲ್ಲೆಡೆ ಕ್ರಿಸ್ಮಸ್ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ. ಪ್ರೀತಿ ಸಾಮರಸ್ಯದ ಸಂಕೇತವಾಗಿರುವ ಕ್ರಿಸ್ಮಸ್ ಹಬ್ಬದ ಶುಭ ದಿನದಂದು ಚರ್ಚ್ ಗಳು, ಪ್ರಾರ್ಥನಾ ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಶುಭಾಶಯ ವಿನಿಮಯ ಮಾಡಿಕೊಳ್ಳಲಾಗಿದೆ.
ಕ್ರಿಸ್ಮಸ್ ಹಿನ್ನೆಲೆಯಲ್ಲಿ ಚರ್ಚ್ ಗಳನ್ನು ವಿದ್ಯುತ್ ಲೈಟ್ ಗಳಿಂದ ಅಲಂಕರಿಸಲಾಗಿತ್ತು. ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಕಣ್ಮನ ಸೆಳೆಯುತ್ತಿವೆ. ಇನ್ನು ಸಾಂತಾಕ್ಲಾಸ್ ವೇಷದಲ್ಲಿ ಪುಟಾಣಿಗಳು ಮಿಂಚಿದ್ದಾರೆ. ಉಡುಗೊರೆ ಪಡೆದು ಸಂಭ್ರಮಿಸಿದ್ದಾರೆ.
ಕ್ರಿಸ್ಮಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಚರ್ಚ್ ಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಕೆಲವು ಕಡೆಗಳಲ್ಲಿ ಕ್ರಿಸ್ತನ ಜನ್ಮ ವೃತ್ತಾಂತ ತಿಳಿಸುವ ಆಕರ್ಷಕ ಗೋದಲಿ ಮಾದರಿ ನಿರ್ಮಿಸಲಾಗಿದೆ. ಕ್ರೈಸ್ತರು ಒಳಗೊಂಡಂತೆ ಇತರೆ ಧರ್ಮದವರು ಕೂಡ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಕೇಕ್ ಹಂಚಿ ಸಂಭ್ರಮಿಸಿದ್ದಾರೆ. ಕ್ರಿಸ್ ಮಸ್ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಗಣ್ಯರು ಶುಭಾಶಯ ಹೇಳಿದ್ದಾರೆ.

