ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಇದರ ಪರಿಣಾಮ ಬಸ್ ಸಂಚಾರ ಇಲ್ಲದೇ ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ.
ಬಸ್ ಬಂದ್ ಆಗಿದ್ದರೂ ರಾಜ್ಯದಲ್ಲಿ ಇಂದು ಶಾಲೆಗಳಿಗೆ ಯಾವುದೇ ರೀತಿಯ ರಜೆ ಇರುವುದಿಲ್ಲ. ಸರ್ಕಾರಿ, ಖಾಸಗಿ ಅನುದಾನಿತ ಶಾಲೆ, ಕಾಲೇಜುಗಳಿಗೆ ರಜೆ ಇರುವುದಿಲ್ಲ. ಎಂದಿನಂತೆ ಶಾಲಾ ಕಾಲೇಜುಗಳು ನಡೆಯಲಿದ್ದು, ಬಸ್ ಸಗಳನ್ನು ಆಶ್ರಯಿಸಿರುವ ವಿದ್ಯಾರ್ಥಿಗಳು ಪರದಾಟ ನಡೆಸುವಂತಾಗಿದೆ.
ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು, ಜನತೆಗೆ ಬಸ್ ಬಂದ್ ಬಿಸಿ ತಟ್ಟಲಿದೆ. ಈಗಾಗಲೇ ಬಹುತೇಕ ಕಡೆ ಬಸ್ ಸಂಚಾರ ಸ್ಥಗಿತವಾಗಿ ತೊಂದರೆಯಾಗಿದೆ. ಸಾರಿಗೆ ನೌಕರರು ಕೆಲಸಕ್ಕೆ ಗೈರು ಹಾಜರಾಗಿರುವುದರಿಂದ ಮುಷ್ಕರ ಬಿಸಿ ತಟ್ಟಿದೆ. ಹೀಗಿದ್ದರೂ ಎಂದಿನಂತೆ ಶಾಲಾ, ಕಾಲೇಜ್ ನಡೆಯಲಿವೆ ಎಂದು ಹೇಳಲಾಗಿದೆ.