BREAKING: ಬಿಹಾರ ಚುನಾವಣೆ ಫಲಿತಾಂಶ: NDA 70, MGB 43 ಕ್ಷೇತ್ರಗಳಲ್ಲಿ ಮುನ್ನಡೆ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಆರಂಭಿಕ ಹಂತದಲ್ಲಿ ಬಿಜೆಪಿ- ಜೆಡಿಯು ಮೈತ್ರಿಕೂಟ ಎನ್.ಡಿ.ಎ. 70 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.

ಬಿಜೆಪಿ 35, ಜೆಡಿಯು 30, ಎಲ್‌ಜೆಪಿ 3, ಹೆಚ್.ಎಂ.ಎಂ. 1, ಆರ್.ಎಲ್.ಎಂ. ಒಂದು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

ಮಹಾಘಟಬಂಧನ್ ಮೈತ್ರಿಕೂಟ(MGB) 46 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದೆ. ಆರ್.ಜೆ.ಡಿ. 40, ಕಾಂಗ್ರೆಸ್ 3, ವಿಐಪಿ 1, ಲೆಫ್ಟ್ 3, IIP 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

ರಾಘೋಪುರ ಕ್ಷೇತ್ರದಲ್ಲಿ ತೇಜಸ್ವಿ ಯಾದವ್, ತಾರಾಪುರ ಕ್ಷೇತ್ರದಲ್ಲಿ ಸಾಮ್ರಾಟ್ ಚೌಧರಿ ಮುನ್ನಡೆ ಸಾಧಿಸಿದ್ದಾರೆ. ಲಖಿಸರೈ ಕ್ಷೇತ್ರದಲ್ಲಿ ವಿಜಯಕುಮಾರ್ ಸಿಂಗ್ ಮುನ್ನಡೆ ಗಳಿಸಿದ್ದಾರೆ. ಅಲಿನಗರ ಬಿಜೆಪಿ ಅಭ್ಯರ್ಥಿ ಮೈಥಿಲಿ ಠಾಗೋರ್ ಮುನ್ನಡೆ ಗಳಿಸಿದ್ದಾರೆ.

ಬಿಹಾರದಲ್ಲಿ ಶೇ. 67.13 ರಷ್ಟು ಮತದಾನ ಆಗಿದ್ದು, ಇದು 1951 ರಲ್ಲಿ ಬಿಹಾರದ ಮೊದಲ ವಿಧಾನಸಭಾ ಚುನಾವಣೆಯ ನಂತರದ ಅತ್ಯಧಿಕವಾಗಿದೆ. ನವೆಂಬರ್ 6 ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಶೇಕಡಾ 65.08 ರಷ್ಟು ಮತದಾನವಾದರೆ, ನವೆಂಬರ್ 11 ರಂದು ನಡೆದ ಎರಡನೇ ಹಂತದಲ್ಲಿ ಶೇಕಡಾ 69.20 ರಷ್ಟು ಮತದಾನವಾಗಿದೆ. ಈ ವರ್ಷದ ಚುನಾವಣೆಯಲ್ಲಿ ಬಹುಕೋನ ಸ್ಪರ್ಧೆ ಕಂಡುಬಂದಿದ್ದು, ಎನ್‌ಡಿಎ ಮತ್ತು ಆರ್‌ಜೆಡಿ, ಕಾಂಗ್ರೆಸ್, ಸಿಪಿಐ (ಎಂಎಲ್), ಸಿಪಿಐ, ಸಿಪಿಎಂ ಮತ್ತು ವಿಕಾಸೀಲ್ ಇನ್ಸಾನ್ ಪಾರ್ಟಿ (ವಿಐಪಿ) ಸೇರಿದಂತೆ ಐಎನ್‌ಡಿಐಎ ಬಣಗಳು ಸ್ಪರ್ಧಿಸಿದ್ದವು. ಹೊಸ ಅಭ್ಯರ್ಥಿ ಪ್ರಶಾಂತ್ ಕಿಶೋರ್ ಅವರ ಜಾನ್ ಸುರಾಜ್ ಕೂಡ ರಾಜ್ಯದ ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read