HomeLatest NewsBREAKING: ಕಾರ್ ನಿಲ್ಲಿಸಿ ಜ್ಯೂಸ್ ಕುಡಿಯಲು ಹೋದವರಿಗೆ ಬಿಗ್ ಶಾಕ್: 15.5 ಲಕ್ಷ ನಗದು, 35...

BREAKING: ಕಾರ್ ನಿಲ್ಲಿಸಿ ಜ್ಯೂಸ್ ಕುಡಿಯಲು ಹೋದವರಿಗೆ ಬಿಗ್ ಶಾಕ್: 15.5 ಲಕ್ಷ ನಗದು, 35 ಗ್ರಾಂ ಚಿನ್ನ ಕಳವು

ಯಾದಗಿರಿ: ನಿಲ್ಲಿಸಿದ್ದ ಕಾರ್ ನಲ್ಲಿದ್ದ ಹಣ, ಚಿನ್ನಾಭರಣವನ್ನು ಕದ್ದು ಕಳ್ಳರು ಪರಾರಿಯಾದ ಘಟನೆ ಯಾದಗಿರಿ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ.

15.5 ಲಕ್ಷ ರೂಪಾಯಿ ಹಣ ಮತ್ತು 35 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಲಾಗಿದೆ. ಶರಣಪ್ಪ ಎಂಬುವರಿಗೆ ಸೇರಿದ ಹಣ ಹಾಗೂ ಚಿನ್ನಾಭರಣ ಕಳ್ಳತನವಾಗಿದೆ.

ಯಾದಗಿರಿ ತಾಲೂಕಿನ ಸಮೀಪ ಚಕ್ರ ಗ್ರಾಮದ ನಿವಾಸಿ ಶರಣಪ್ಪ ಆಸ್ತಿ ಖರೀದಿಗೆ ಕುಟುಂಬ ಸಮೇತ ಕಾರ್ ನಲ್ಲಿ ಬಂದಿದ್ದರು. ಅವರು ಕಾರ್ ನಿಲ್ಲಿಸಿ ಜ್ಯೂಸ್ ಕುಡಿಯಲು ಹೋಗಿದ್ದಾಗ ಕಳ್ಳರು ಕೃತ್ಯವೆಸಗಿದ್ದಾರೆ. ಕಾರ್ ಹಿಂಬಾಲಿಸಿಕೊಂಡು ಬೈಕ್ ನಲ್ಲಿ ಬಂದಿದ್ದವರಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular