ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಬಿಗ್ ರಿಲೀಫ್ ಸಿಕ್ಕಿದೆ. ಮಹಿಳಾ ಸಂಘಗಳಿಂದ ಅಧಿಕ ಬಡ್ಡಿ ವಸೂಲಿ ಆರೋಪದ ಮೇಲೆ ಡಿ. ವೀರೇಂದ್ರ ಹೆಗಡೆ ಮತ್ತು ಕುಟುಂಬದವರ ವಿರುದ್ಧದ ಪ್ರಕರಣ ರದ್ದು ಮಾಡಲಾಗಿದೆ.
ರಂಜನ್ ರಾವ್ ಎರ್ಡೂಡು ಎಂಬುವವರ ಖಾಸಗಿ ದೂರನ್ನು ರದ್ದುಪಡಿಸಲಾಗಿದೆ. ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಹೈಕೋರ್ಟ್ ಪೀಠದಿಂದ ಆದೇಶ ನೀಡಲಾಗಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವೀರೇಂದ್ರ ಹೆಗಡೆ ಅವರ ಪರ ಹಿರಿಯ ವಕೀಲ ಬಿ.ಪಿ. ಹೆಗಡೆ ವಾದ ಮಂಡಿಸಿದ್ದರು.
ಬ್ಯಾಂಕ್ ಗಳಿಂದ ಸ್ವಸಹಾಯ ಸಂಘಗಳಿಗೆ ಸಾಲ ಕೊಡಿಸಲು ಸಂಸ್ಥೆ ನೆರವಾಗುತ್ತಿದೆ. ಬ್ಯಾಂಕುಗಳು ಸಾಲಕ್ಕೆ ಭದ್ರತೆಯಾಗಿ ಸ್ವಸಹಾಯ ಸಂಘಗಳಿಗೆ ನೆರವಾಗುತ್ತಿದೆ. ಆರ್.ಬಿ.ಐ. ಮಾರ್ಗಸೂಚಿ ಪಾಲಿಸಿ ಸೇತುವೆಯಂತೆ ಸಂಸ್ಥೆ ಕೆಲಸ ಮಾಡಿದೆ. ದುರುದ್ದೇಶದಿಂದ ದೂರು ದಾಖಲು ಎಂದು ಹಿರಿಯ ವಕೀಲ ಬಿ.ಪಿ. ಹೆಗಡೆ ವಾದ ಮಂಡಿಸಿದ್ದಾರೆ. ಯಾವುದೇ ಆಧಾರಗಳಿಲ್ಲದೆ ಕಿರುಕುಳ ನೀಡುವ ಉದ್ದೇಶದ ದೂರು ನೀಡಲಾಗಿದೆ. ದುರುದ್ದೇಶಪೂರಿತವೆಂದು ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.

