ಮಂಗಳೂರು: ಚೆಂಡಿನ ಆಕಾರದ ವಸ್ತು ಸ್ಪೋಟಗೊಂಡು ಬಾಲಕ ಗಾಯಗೊಂಡಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಬಂದಾರು ಗ್ರಾಮದಲ್ಲಿ ಘಟನೆ ನಡೆದಿದೆ.
ಬಂದಾರು ಗ್ರಾಮದಲ್ಲಿ ಚೆಂಡಿನ ಆಕಾರದ ವಸ್ತು ಸ್ಪೋಟಗೊಂಡು ಅಭೀಶ್ ಎಂಬ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಲಾಗಿದೆ. ಅಭೀಶ್ ಆಟ ಆಡುತ್ತಿದ್ದ ವೇಳೆ ಚೆಂಡಿನ ಆಕಾರದ ವಸ್ತು ಪತ್ತೆಯಾಗಿತ್ತು. ಅದನ್ನು ಬಾಲ್ ಎಂದುಕೊಂಡು ಬ್ಯಾಟ್ ನಿಂದ ಹೊಡೆದಾಗ ಏಕಾಏಕಿ ಸ್ಪೋಟಗೊಂಡಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

