ಮಂಡ್ಯ: ವಿಸಿ ನಾಲೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನಾರ್ತ್ ಬ್ಯಾಂಕ್ ಸಮೀಪ ಘಟನೆ ನಡೆದಿದೆ.
ಸೋನು(17), ಸಿಮ್ರಾನ್(16) ಸಿದ್ದೇಶ್(9) ಮೃತಪಟ್ಟವರು ಎಂದು ಹೇಳಲಾಗಿದೆ. ಮೃತರು ಮೈಸೂರಿನ ಗೌಸಿಯಾ ನಗರದ ನಿವಾಸಿಗಳಾಗಿದ್ದಾರೆ. ಚಿಕ್ಕಾಯರಹಳ್ಳಿ ಮಾರಮ್ಮನ ಜಾತ್ರೆಗೆ ಆಗಮಿಸಿದ್ದರು.
ಅವರು ಕಾಲುವೆ ಇಳಿದಾಗ ಆಕಸ್ಮಿವಾಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸೋನು ಹಾಗೂ ಸಿದ್ದೇಶ್ ಮೃತದೇಹಗಳನ್ನು ಸ್ಥಳೀಯರು ಹೊರಗೆ ತೆಗೆದಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.