HomeLatest NewsBREAKING : ಕಲಬುರಗಿಯಲ್ಲಿ ಕುಡಿತದ ಚಟ ಬಿಡಲು ನಾಟಿ ಔಷಧಿ ಸೇವಿಸಿದ್ದ ಮತ್ತೋರ್ವ ಸಾವು, ಸಾವಿನ...

BREAKING : ಕಲಬುರಗಿಯಲ್ಲಿ ಕುಡಿತದ ಚಟ ಬಿಡಲು ನಾಟಿ ಔಷಧಿ ಸೇವಿಸಿದ್ದ ಮತ್ತೋರ್ವ ಸಾವು, ಸಾವಿನ ಸಂಖ್ಯೆ 4 ಕ್ಕೇರಿಕೆ.!

ಕಲಬುರಗಿ : ಕುಡಿತದ ಚಟ ಬಿಡಲು ಔಷಧಿ ಸೇವಿಸಿದ್ದ ಮತ್ತೋರ್ವ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 4 ಕ್ಕೇರಿಕೆಯಾಗಿದೆ.

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಇಮಡಾಪುರ ಗ್ರಾಮದಲ್ಲಿ ಬುಧವಾರ ಘಟನೆ ನಡೆದಿದೆ. ಚಿಕಿತ್ಸೆ ಫಲಿಸದೇ ಮನೋಹರ (30) ಎಂಬ ಯುವಕ ಮೃತಪಟ್ಟಿದ್ದಾನೆ.

ಸೇಡಂ ತಾಲೂಕಿನ ಬುರಗಪಲ್ಲಿ ಗ್ರಾಮದ ಲಕ್ಷ್ಮೀನರಸಿಂಹಲು(45), ಶಹಾಬಾದ ಪಟ್ಟಣದ ಗಣೇಶ್ ಬಾಬು ರಾಥೋಡ(24), ಮದಗಲ್ ಗ್ರಾಮದ ನಾಗೇಶ ಭೀಮೇಶಪ್ಪ ಗಡಗು(25) ಮೃತಪಟ್ಟವರು. ಕುಡಿತದ ಚಟದಿಂದ ಮುಕ್ತಿ ಹೊಂದಲು ಇವರು ನಾಟಿ ಔಷಧ ಸೇವಿಸಿದ್ದು, ಈ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular