HomeKarnatakaBREAKING : ಬೆಳಗಾವಿಯಲ್ಲಿ ಮತ್ತೊಂದು `ಡೀಫ್ ಫೇಕ್ ' ಪ್ರಕರಣ ಬಯಲಿಗೆ : ಯುವತಿಯ ಫೋಟೋ...

BREAKING : ಬೆಳಗಾವಿಯಲ್ಲಿ ಮತ್ತೊಂದು `ಡೀಫ್ ಫೇಕ್ ‘ ಪ್ರಕರಣ ಬಯಲಿಗೆ : ಯುವತಿಯ ಫೋಟೋ ಎಡಿಟ್ ಮಾಡಿ ಬ್ಲ್ಯಾಕ್ ಮೇಲ್!

ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಡೀಫ್ ಫೇಕ್ ಪ್ರಕರಣ ದಾಖಲಾಗಿದ್ದು, ಪ್ರೀತಿ ನಿರಾಕರಿಸಿದ ಯುವತಿಯ ಫೋಟೋವನ್ನು ಎಡಿಟ್ ಮಾಡಿ ಬ್ಲ್ಯಾಕ್ ಮಾಡಿರುವ ಆರೋಪ ಕೇಳಿಬಂದಿದೆ.

ಬೆಳಗಾವಿ ಜಿಲ್ಲೆಯ ಖಾನಪುರ ಪಟ್ಟಣದ ಮಂಥನ್ ಪಾಟೀಲ್ ಎಂಬಾತ ಪ್ರೀತಿ ನಿರಾಕರಿಸಿದ ಯುವತಿಯ ಫೋಟೋ ವನ್ನು ಯಾವುದೋ ನಗ್ನ ದೇಹದ ಯುವತಿಯ ಫೋಟೋಗೆ ಎಡಿಟ್ ಮಾಡಿ ಬ್ಯ್ಲಾಕ್ ಮೇಲ್ ಮಾಡಿದ್ದು, ಸದ್ಯ ಆರೋಪಿ ಮಂಥನ್ ಪಾಟೀಲ್ ನನ್ನು ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಮಂಥನ್ ಪಾಟೀಲ್ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಯುವತಿ ಹಾಗೂ ಯುವತಿಯ ಮೂವರು ಸ್ನೇಹಿತರ ಫೋಟೋಗಳನ್ನು ಎಡಿಟ್ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಸಿಟ್ಟೆಗೆದ್ದ ಯುವತಿಯರು ಖಾನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular