BREAKING : ‘ಪುಷ್ಪ-2’ ಚಿತ್ರದಲ್ಲಿ ಪೊಲೀಸರಿಗೆ ಅವಮಾನ ಆರೋಪ : ನಟ ‘ಅಲ್ಲು ಅರ್ಜುನ್’ ವಿರುದ್ಧ ಮತ್ತೊಂದು ದೂರು ದಾಖಲು |Actor allu arjun

ಇತ್ತೀಚೆಗೆ ತೆರೆಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಪುಷ್ಪ-2 ಚಿತ್ರ ಹಲವು ವಿವಾದಗಳಿಂದ ಸುದ್ದಿಯಾಗುತ್ತಿದೆ.

ಈ ಚಿತ್ರದಲ್ಲಿ ಪೊಲೀಸರಿಗೆ ಅವಮಾನ ಮಾಡಿರುವ ಆರೋಪದ ಹಿನ್ನೆಲೆ ನಟ ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್ ಹಾಗೂ ಚಿತ್ರದ ನಿರ್ಮಾಪಕರ ವಿರುದ್ಧ ದೂರು ದಾಖಲಾಗಿದೆ.

ಪುಷ್ಪ 2: ದಿ ರೈಸ್’ ಚಿತ್ರದ ಮೂಲಕ ಪೊಲೀಸರಿಗೆ ಅವಮಾನ ಮಾಡಲಾಗಿದೆ ಎಂದು ತೆಲಂಗಾಣದ ಕಾಂಗ್ರೆಸ್ ಮುಖಂಡ ತೀನ್ಮಾರ್ ಮಲ್ಲಣ್ಣ ಆರೋಪಿಸಿ ಮೇಡಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಿತ್ರದ ದೃಶ್ಯದಲ್ಲಿ ಪೊಲೀಸ್ ಅಧಿಕಾರಿ (ಫಹದ್ ಫಾಸಿಲ್) ಈಜುಕೊಳದಲ್ಲಿ ಇರುವಾಗ ಪುಷ್ಪರಾಜ್ ( ಅಲ್ಲು ಅರ್ಜುನ್ ) ಬಂದು ಮೂತ್ರ ವಿಸರ್ಜನೆ ಮಾಡುತ್ತಾನೆ. ಈ ದೃಶ್ಯವನ್ನು ಅವಹೇಳನಕಾರಿ ಎಂದು ಕರೆದಿರುವ ಮಲ್ಲಣ್ಣ ಇದು ಪೊಲೀಸರಿಗೆ ಮಾಡಿರುವ ಅವಮಾನ ಎಂದು ಕರೆದಿದ್ದಾರೆ.

ಇನ್ನೂ,ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಗೆ ನಟ ಅಲ್ಲು ಅರ್ಜುನ್ ಹಾಜರಾಗಿದ್ದಾರೆ.ವಕೀಲರ ಜೊತೆ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಬಂದ ನಟ ಅಲ್ಲು ಅರ್ಜುನ್ ವಿಚಾರಣೆಗೆ ಹಾಜರಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read