HomeIndiaBREAKING : 'ಚುನಾವಣಾ ಬಾಂಡ್' ಗಳ ಎಲ್ಲಾ ವಿವರಗಳನ್ನು ಚು. ಆಯೋಗಕ್ಕೆ ಸಲ್ಲಿಸಿದ SBI

BREAKING : ‘ಚುನಾವಣಾ ಬಾಂಡ್’ ಗಳ ಎಲ್ಲಾ ವಿವರಗಳನ್ನು ಚು. ಆಯೋಗಕ್ಕೆ ಸಲ್ಲಿಸಿದ SBI

ನವದೆಹಲಿ : ಚುನಾವಣಾ ಬಾಂಡ್ ಸಂಖ್ಯೆಗಳ ವಿವರಗಳು ಸೇರಿದಂತೆ ಚುನಾವಣಾ ಬಾಂಡ್ ಗಳ ಸಂಪೂರ್ಣ ವಿವರಗಳನ್ನು ಎಸ್ ಬಿ ಐ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ.

ಸುಪ್ರೀಂ ಕೋರ್ಟ್ ಆದೇಶದ ಅನುಸಾರವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಚುನಾವಣಾ ಬಾಂಡ್ಗಳ ಸಂಪೂರ್ಣ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ.

ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಆಯ್ದ ಮಾಹಿತಿಯ ನೀಡುವುದನ್ನು ನಿಲ್ಲಿಸಿ ಸಂಪೂರ್ಣ ಮಾಹಿತಿಯನ್ನು ಮಾರ್ಚ್ 21ರೊಳಗೆ ಬಹಿರಂಗಪಡಿಸುವಂತೆ ಎಸ್.ಬಿ.ಐ.ಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ತಾಕೀತು ಮಾಡಿತ್ತು. ಚುನಾವಣಾ ಬಾಂಡ್ ಖರೀದಿದಾರರು ಮತ್ತು ಅದನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ಸಂಬಂಧ ಬಹಿರಂಗಪಡಿಸುವ ವಿಶಿಷ್ಟ ಬಾಂಡ್ ನಂಬರ್ ಗಳ ಸಮಗ್ರ ಮಾಹಿತಿ ಕೂಡ ಹೊಂದಿರಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠದಿಂದ ನಿರ್ದೇಶನ ನೀಡಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾರ್ಚ್ 18 ರಂದು ಸುಪ್ರೀಂ ಕೋರ್ಟ್ ಎಸ್ಬಿಐಗೆ ತನ್ನ ಬಳಿ ಇರುವ ಚುನಾವಣಾ ಬಾಂಡ್ಗಳ ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸುವಂತೆ ಕೇಳಿತ್ತು. ಇದರೊಂದಿಗೆ, ಚುನಾವಣಾ ಬಾಂಡ್ ಗಳ ಬಗ್ಗೆ ಈಗ ಐದು ವಿಚಾರಗಳು ತಿಳಿಯುತ್ತವೆ – ಬಾಂಡ್ ಖರೀದಿಸುವವರ ಹೆಸರು, ಮುಖಬೆಲೆ ಮತ್ತು ಬಾಂಡ್ ನ ನಿರ್ದಿಷ್ಟ ಸಂಖ್ಯೆ, ಬಾಂಡ್ ಅನ್ನು ನಗದೀಕರಿಸಿದ ಪಕ್ಷದ ಹೆಸರು, ರಾಜಕೀಯ ಪಕ್ಷಗಳ ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳು, ಮುಖಬೆಲೆ ಮತ್ತು ನಗದೀಕರಿಸಿದ ಬಾಂಡ್ ಗಳ ಸಂಖ್ಯೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular