ಹಾಸನ: ಚಲಿಸುತ್ತಿದ್ದ ಬಸ್ ನಲ್ಲಿ ಏಕಾಏಕಿ ಭಾರಿ ಪ್ರಮಾಣದ ಹೊಗೆ ಆವರಿಸಿಕೊಂಡಿದೆ. ಎಸಿ ಟರ್ಬೋ ಗ್ಯಾಸ್ ಸೋರಿಕೆಯಾಗಿ ಬಸ್ ನಲ್ಲಿ ಹೋಗಿ ಆವರಿಸಿದೆ. ಖಾಸಗಿ ಬಸ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ಅನಾಹುತ ತಪ್ಪಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಾರನಹಳ್ಳಿಯ ಸಮೀಪ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟ್ ನ ಮಾರನಹಳ್ಳಿ ಸಮೀಪ ಘಟನೆ ನಡೆದಿದೆ. ಬಸ್ ನಲ್ಲಿ ಹೊಗೆ ಆವರಿಸುತ್ತಿದ್ದಂತೆ ಪ್ರಯಾಣಿಕರನ್ನು ಚಾಲಕ ಕೆಳಗೆ ಇಳಿಸಿದ್ದಾರೆ.
ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೊರಟಿದ್ದ ಖಾಸಗಿ ಬಸ್ ಶಿರಾಡಿ ಘಾಟ್ ನಲ್ಲಿ ಬಸ್ ಚಲಿಸುವಾಗ ಹೊಗೆ ಕಾಣಿಸಿಕೊಂಡಿದೆ. ಏಕಾಯಕಿ ಎಸಿ ಟರ್ಬೋ ಗ್ಯಾಸ್ ಸೋರಿಕೆಯಾಗಿ ಹೊಗೆ ಆವರಿಸಿದ್ದು, ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದರಿಂದ ಅನಾಹುತ ತಪ್ಪಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.