ತುಮಕೂರು: ಕೆರೆಗೆ ಬಿದ್ದು ಮೂವರು ದಾರುಣ ಸಾವು ಕಂಡ ಘಟನೆ ತುಮಕೂರು ಜಿಲ್ಲೆ ಅಂದನಕೆರೆ ಬಳಿಯ ಎರೆಕಟ್ಟೆ ಕೆರೆಯಲ್ಲಿ ನಡೆದಿದೆ.
ಇಬ್ಬರು ಸ್ನೇಹಿತೆಯರು ಕೆರೆಯಲ್ಲಿ ಕಾಲು ಜಾರಿ ಬಿದ್ದಿದ್ದು, ಅವರನ್ನು ರಕ್ಷಿಸಲು ಹೋದ ಬಾಲಕಿ ತಂದೆ ಕೂಡ ಸಾವನ್ನಪ್ಪಿದ್ದಾರೆ.
ವೆಂಕಟೇಶ್(48), ಪುತ್ರಿ ಶ್ರಾವ್ಯ(12) ಆಕೆಯ ಸ್ನೇಹಿತೆ ಪುಣ್ಯ(11) ಮೃತಪಟ್ಟವರು ಎಂದು ಹೇಳಲಾಗಿದೆ. ಕೆರೆಯ ಕಡೆಗೆ ವಿಹಾರಕ್ಕೆ ತೆರಳಿದ್ದ ಶ್ರಾವ್ಯ ಮತ್ತು ಸ್ನೇಹಿತೆ ಪುಣ್ಯ ಕಾಲು ಜಾರಿ ಕೆರೆಗೆ ಬಿದ್ದಿದ್ದು, ಇಬ್ಬರು ಬಾಲಕಿಯರ ರಕ್ಷಣೆಗೆ ಬಂದಿದ್ದ ತಂದೆ ವೆಂಕಟೇಶ್ ಕೂಡ ಸಾವನ್ನಪ್ಪಿದ್ದಾರೆ. ಶವಗಳನ್ನು ಅಗ್ನಿಶಾಮಕದಳ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಅಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You Might Also Like
TAGGED:ಕೆರೆ