BREAKING NEWS: ಇರಾನ್ ನಲ್ಲಿ ಅವಳಿ ಬಾಂಬ್ ಸ್ಪೋಟ: 73 ಜನ ಸಾವು, 170ಕ್ಕೂ ಹೆಚ್ಚು ಮಂದಿಗೆ ಗಾಯ

ಇರಾನ್ ನಲ್ಲಿ ಅವಳಿ ಬಾಂಬ್ ಸ್ಪೋಟದಲ್ಲಿ 73 ಮಂದಿ ಸಾವನ್ನಪ್ಪಿದ್ದಾರೆ. 170 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 2020 ರಲ್ಲಿ ನಡೆದ ಗಾರ್ಡ್ಸ್ ಜನರಲ್ ಖಾಸೆಮ್ ಸೊಲೈಮಾನಿ ಹತ್ಯೆಯ ವಾರ್ಷಿಕೋತ್ಸವದಲ್ಲಿ ಸೇರಿದ್ದ ಜನಸಮೂಹದ ನಡುವೆ ಸ್ಫೋಟಗಳು ಸಂಭವಿಸಿವೆ.

ದಕ್ಷಿಣ ನಗರದ ಕೆರ್ಮನ್‌ ನಲ್ಲಿರುವ ಸಾಹೇಬ್ ಅಲ್ ಜಮಾನ್ ಮಸೀದಿಯಲ್ಲಿ ಇರಾನ್‌ ನ ಕ್ರಾಂತಿಕಾರಿ ಗಾರ್ಡ್‌ಗಳ ಮುಖ್ಯಸ್ಥರ ಸಮಾಧಿಯ ಬಳಿ ನಡೆದ ಈ ಘಟನೆಯಲ್ಲಿ ಕನಿಷ್ಠ 20 ಜನರು ಪ್ರಾಣ ಕಳೆದುಕೊಂಡಿದ್ದಾರೆ ರಾಜ್ಯ ದೂರದರ್ಶನ ವರದಿ ಮಾಡಿದೆ.

ಸ್ಫೋಟದ ಕಾರಣದ ಬಗ್ಗೆ ತಕ್ಷಣದ ಮಾಹಿತಿ ಇಲ್ಲವಾಗಿದ್ದು, ಸ್ಫೋಟದಲ್ಲಿ 30 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್‌ ನ ವಿದೇಶಿ ಕಾರ್ಯಾಚರಣೆಯ ಅಂಗವಾದ ಕುಡ್ಸ್ ಫೋರ್ಸ್‌ಗೆ ಸೊಲೈಮಾನಿ ನೇತೃತ್ವ ವಹಿಸಿದ್ದರು, ಮಧ್ಯಪ್ರಾಚ್ಯದಾದ್ಯಂತ ಮಿಲಿಟರಿ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಿದ್ದರು.

ಬಾಗ್ದಾದ್ ವಿಮಾನ ನಿಲ್ದಾಣದ ಹೊರಗೆ US ಡ್ರೋನ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಅವರು ಇರಾನ್‌ನಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಉಳಿದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read