HomeLatest NewsBREAKING NEWS: ಶಿವಮೊಗ್ಗ ತುಂಗಾ ನದಿ ಸೇತುವೆ ಮೇಲೆ ರೈಲಿಂದ ಬೇರ್ಪಟ್ಟ 6 ಬೋಗಿಗಳು: ತಪ್ಪಿದ...

BREAKING NEWS: ಶಿವಮೊಗ್ಗ ತುಂಗಾ ನದಿ ಸೇತುವೆ ಮೇಲೆ ರೈಲಿಂದ ಬೇರ್ಪಟ್ಟ 6 ಬೋಗಿಗಳು: ತಪ್ಪಿದ ಭಾರೀ ದುರಂತ

ಶಿವಮೊಗ್ಗ: ಶಿವಮೊಗ್ಗದಲ್ಲಿ ತುಂಗಾ ನದಿ ಸೇತುವೆ ಮೇಲೆ ಆರು ಬೋಗಿಗಳು ರೈಲಿನಿಂದ ಬೇರ್ಪಟ್ಟ ಘಟನೆ ನಡೆದಿದೆ. ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರೀ ರೈಲು ದುರಂತ ತಪ್ಪಿದೆ.

ಹೊಳೆ ಬಸ್ ನಿಲ್ದಾಣ ಸಮೀಪ ಘಟನೆ ನಡೆದಿದೆ. ತಾಳಗುಪ್ಪ-ಮೈಸೂರು ರೈಲು ತುಂಗಾ ನದಿ ಸೇತುವೆ ಮೇಲೆ ಸಂಚರಿಸುವ ವೇಳೆಯಲ್ಲೇ 6 ಬೋಗಿಗಳು ಬೇರ್ಪಟ್ಟಿವೆ. 21 ಬೋಗಿಗಳ ರೈಲಿನ ಆರು ಬೋಗಿಗಳು ಬೇರ್ಪಟ್ಟಿದ್ದು ಸೇತುವೆ ಮೇಲೆ ನಿಂತಿವೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ರೈಲು ಸ್ಥಳಕ್ಕೆ ಬಂದಿದ್ದು, ಬೋಗಿಗಳನ್ನು ಯಶಸ್ವಿಯಾಗಿ ಜೋಡಿಸಲಾಗಿದೆ. 45 ನಿಮಿಷಗಳ ಕಾಲ ಬೋಗಿಗಳು ಬೇರ್ಪಟ್ಟು ಆತಂಕ ಉಂಟಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular