HomeIndiaBREAKING: ಜಾರ್ಖಂಡ್ ನಲ್ಲಿ ಘೋರ ದುರಂತ: ರೈಲು ಹರಿದು 12 ಪ್ರಯಾಣಿಕರು ಸಾವು

BREAKING: ಜಾರ್ಖಂಡ್ ನಲ್ಲಿ ಘೋರ ದುರಂತ: ರೈಲು ಹರಿದು 12 ಪ್ರಯಾಣಿಕರು ಸಾವು

ಜಮ್ತಾರಾ: ಜಾರ್ಖಂಡ್‌ ನ ಜಮ್ತಾರಾದಲ್ಲಿ ಬುಧವಾರ ಸಂಜೆ ಭೀಕರ ರೈಲು ಅಪಘಾತ ಸಂಭವಿಸಿದ್ದು, ಜಮ್ತಾರಾ-ಕರ್ಮತಾಂಡ್ ಪ್ರದೇಶದ ಕಲಾಜಾರಿಯಾ ಬಳಿ ರೈಲು ಹರಿದು ಸುಮಾರು 12 ಜನ ಸಾವನ್ನಪ್ಪಿದ್ದಾರೆ.

ದುರಂತ ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಂಡ ಜಮ್ತಾರಾ ಡೆಪ್ಯುಟಿ ಕಮಿಷನರ್,  ಜಮ್ತಾರಾದ ಕಲಾಜಾರಿಯಾ ರೈಲ್ವೆ ನಿಲ್ದಾಣದಲ್ಲಿ ರೈಲು ಪ್ರಯಾಣಿಕರ ಮೇಲೆ ಹರಿದು ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದಿದೆ. ಸಾವಿನ ನಿಖರ ಸಂಖ್ಯೆಯನ್ನು ನಂತರ ದೃಢೀಕರಿಸಲಾಗುವುದು. ವೈದ್ಯಕೀಯ ತಂಡಗಳು ಮತ್ತು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ, ಪ್ಯಾಸೆಂಜರ್ ರೈಲೊಂದು ಜಮ್ತಾರಾದಲ್ಲಿನ ಕಲಾಜಾರಿಯಾ ರೈಲು ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ ಅದರ ಲೊಕೊ ಪೈಲಟ್ ರೈಲು ಮಾರ್ಗದ ಅಂಚಿನಲ್ಲಿ ಧೂಳು ಏರುತ್ತಿರುವುದನ್ನು ಗಮನಿಸಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಭಾವಿಸಿ ರೈಲನ್ನು ನಿಲ್ಲಿಸಿದರು, ನಂತರ ಪ್ರಯಾಣಿಕರು ಇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದೇ ವೇಳೆಗೆ ಸಮಾನಾಂತರ ಮಾರ್ಗದಿಂದ ಮತ್ತೊಂದು ರೈಲು ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ಸ್ಥಳದಲ್ಲಿ ಪೊಲೀಸರು ಮತ್ತು ವೈದ್ಯಕೀಯ ತಂಡಗಳು ಇವೆ. ಮೃತದೇಹಗಳನ್ನು ಹೊರತೆಗೆಯಲಾಗುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular