HomeKarnatakaBREAKING: ನೀರಿನ ಟ್ರ್ಯಾಕ್ಟರ್ ಹರಿದು 4 ವರ್ಷದ ಬಾಲಕ ಸಾವು

BREAKING: ನೀರಿನ ಟ್ರ್ಯಾಕ್ಟರ್ ಹರಿದು 4 ವರ್ಷದ ಬಾಲಕ ಸಾವು

ಬೆಂಗಳೂರು: ನೀರಿನ ಟ್ರ್ಯಾಕ್ಟರ್ ಹರಿದು 4 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಸಿ.ಕೆ.ಪಾಳ್ಯದಲ್ಲಿ ನಡೆದಿದೆ.

4 ವರ್ಷದ ಭುವನ್ ಮೃತ ಬಾಲಕ. ಭುವನ್ ತನ್ನ ಅಣ್ಣನೊಂದಿಗೆ ಐಸ್ ಕ್ರೀಮ್ ತರಲೆಂದು ಬೇಕರಿಗೆ ಬಂದಿದ್ದ. ಬೇಕರಿಯಿಂದ ವಾಪಸ್ ತೆರಳುತ್ತಿದ್ದಾಗ ಬಾಲಕನ ಮೇಲೆ ನೀರಿನ ಟ್ರ್ಯಾಕ್ಟರ್ ಹರಿದು ಹೋಗಿದೆ. ಅಪಘಾತದ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಂಭೀರವಾಗಿ ಗಯಗೊಂಡಿದ್ದ ಭುವನ್ ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಬಾಲಕ ಕೊನೆಯುಸಿರೆಳೆದಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಟ್ರ್ಯಾಕ್ಟರ್ ಚಾಲಕನಿಂದ ಈ ದುರತ ಸಂಭವಿಸಿದೆ. ಮಗುವನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.

For Latest News Updates, Join Our Whatsapp Community🚩
RELATED ARTICLES

Most Popular