ಧರ್ಮಸ್ಥಳ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಮಾಸ್ಕ್ ಮ್ಯಾನ್ ನನ್ನು 10 ದಿನ ಎಸ್ ಐ ಟಿ ಕಸ್ಟಡಿಗೆ ನೀಡಿ ಬೆಳ್ತಂಗಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಸುದೀರ್ಘ ವಿಚಾರಣೆ ನಡೆಸಿದ ಎಸ್ ಐ ಟಿ ಪೊಲೀಸರು ಇಂದು ಮಾಸ್ಕ್ ಮ್ಯಾನ್ ನನ್ನು ವಶಕ್ಕೆ ಪಡೆದು ಕೋರ್ಟ್ ಗೆ ಹಾಜರುಪಡಿಸಿ ನಂತರ ತಮ್ಮ ವಶಕ್ಕೆ ನೀಡುವಂತೆ ಕೇಳಿಕೊಂಡಿದ್ದರು. ಪೊಲೀಸರ ಮನವಿ ಸ್ವೀಕರಿಸಿದ ಕೋರ್ಟ್ ಮಾಸ್ಕ್ ಚಿನ್ನಯ್ಯನನ್ನು 10 ದಿನ ಎಸ್ ಐ ಟಿ ವಶಕ್ಕೆ ನೀಡಿ ಬೆಳ್ತಂಗಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ದೂರುದಾರ ಮಾಸ್ಕ್ ಮ್ಯಾನ್ ನನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದು, ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಮಾಸ್ಕ್ ಮ್ಯಾನ್ ಬಂಧನವಾಗಿದೆ ಎಂದು ಎಸ್ ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೇರೆ ಯಾವುದೇ ವಿಚಾರ ಹೇಳಲಾಗದು. ವರದಿ ಬಂದ ಬಳಿಕವೇ ಎಲ್ಲವೂ ಗೊತ್ತಾಗಲಿದೆ. ವರದಿ ಬರುವ ಮುನ್ನ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದರು.
ತನಿಖೆ ನಡೆಯುತ್ತಿದಾಗ ನಾವು ಹೇಳಿಕೆ ಕೊಡುವಂತಿಲ್ಲ. ಗೊಂದಲ ಸೃಷ್ಟಿ ಮಾಡುವಂತಿಲ್ಲ. ಯಾವುದಾದರೂ ಜಾಲ ಇದೆಯೇ ಇಲ್ಲವೇ? ಷಡ್ಯಂತ ನಡೆದಿದೆಯೇ? ಎಲ್ಲವೂ ಎಸ್ ಐಟಿ ತನಿಖೆ ಮೂಲಕವೇ ಬಯಲಾಗಬೇಕಿದೆ. ತನಿಖೆ ವರದಿ ಬಂದ ಬಳಿಕವೇ ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳಿದರು.
ಮಾಸ್ಕ್ ಮ್ಯಾನ್ ಚಿನ್ನಯ ಸ್ಪೋಟಕ ಹೇಳಿಕೆ
ತಮಿಳುನಾಡಿನಲ್ಲಿದ್ದ ನನ್ನನ್ನು ಹಣದ ಆಮಿಷವೊಡ್ಡಿ ಧರ್ಮಸ್ಥಳಕ್ಕೆ ಗುಂಪೊಂದು ನನ್ನನ್ನು ಕತೆರಂದಿತ್ತು ಎಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಬಾಯ್ಬಿಟ್ಟಿದ್ದಾನೆ.ಎಸ್ ಐಟಿ ವಿಚಾರಣೆ ವೇಳೆ ಮಾಸ್ಕ್ ಮ್ಯಾನ್ ಚಿನ್ನಯ್ಯ ಹಲವು ಸ್ಫೋಟಕ ಅಂಶಗಳನ್ನು ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ತಮಿಳುನಾಡಿನಲ್ಲಿದ್ದ ನನ್ನೌ ಧರ್ಮಸ್ಥಳ ವಿರೋಧಿ ಗ್ಯಾಂಗ್ ನನ್ನು ಭೇಟಿಯಾಗಿದೆ. ಮಾತುಕತೆ ವೇಳೆ ಹಣದ ಆಮಿಷವೊಡ್ದಿದೆ. ಈ ಪ್ರಕರಣದ ಮುಖ್ಯ ನಾಯಕ ನೀನು. ನಿನ್ನಿಂದಲೇ ಪ್ರಕರಣಕ್ಕೆ ರೋಚಕ ತಿರುವು ಎಂದಿದ್ದರು. ಯಾವ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ತನಿಖೆ ಬಳಿಕ ಹಲವು ದೂರುದಾರರು ಬರುತ್ತಾರೆ. ಆರಂಭದಲ್ಲಿ ಬೆಂಗಳೂರಿನಲ್ಲಿ ನನಗೆ ತರಬೇತಿ ನೀಡಲಾಗಿತ್ತು. ಯಾವ ರೀತಿ ಉತ್ತರ ಕೊಡಬೇಕು ಎಂದು ಹೇಳಿಕೊಡಲಾಗಿತ್ತು. ಬೈಕ ಸೂತ್ರಧಾರ ಹೇಳಿಕೊಟ್ಟಂತೆ ನಾನು ಮಾತನಾಡುತ್ತಿದ್ದೆ ಎಂದಿದ್ದಾನೆ.
ಇನ್ನು ಸುಜಾತಾಭಟ್ ದೂರು ನೀಡುವವರೆಗೂ ನನಗೆ ಭಯವಿತ್ತು. ಆಕೆ ದೂರು ಕೊಟ್ಟ ಬಳಿಕ ನನಗೆ ಧೈರ್ಯ ಬಂತು ಎಂದು ಕೂಡ ಮಾಸ್ಕ್ ಮ್ಯಾನ್ ಹೇಳಿದ್ದಾನೆ ಎನ್ನಲಾಗಿದೆ. ನನ್ನನ್ನು ಕರೆದುಕೊಂಡು ಬಂದಿರುವ ಗ್ಯಾಂಗ್ ನಿಂದ 2 ಲಕ್ಷ ಹಣವನ್ನು ಪಡೆದುಕೊಂಡಿರುವುದಾಗಿಯೂ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.