HomeLatest NewsBREAKING : ಜೈಲುಪಾಲಾದ ಕಿರುತೆರೆ ನಟ 'ಮಡೆನೂರು ಮನು', 14 ದಿನ ನ್ಯಾಯಾಂಗ ಬಂಧನ ವಿಧಿಸಿ...

BREAKING : ಜೈಲುಪಾಲಾದ ಕಿರುತೆರೆ ನಟ ‘ಮಡೆನೂರು ಮನು’, 14 ದಿನ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ.!

ಬೆಂಗಳೂರು : ಅತ್ಯಾಚಾರ ಪ್ರಕರಣದಲ್ಲಿ ಕಿರುತೆರೆ ನಟ ಮಡೆನೂರು ಮನು ಜೈಲುಪಾಲಾಗಿದ್ದು, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ.

ಹೌದು., ನ್ಯಾಯಾಲವು 14 ದಿನಗಳ ಕಾಲ ಮಡೆನೂರು ಮನುಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. 2 ದಿನಗಳ ತನಿಖೆ, ಮಹಜರು, ಹೇಳಿಕೆ ದಾಖಲು ಇತ್ಯಾದಿಗಳ ಬಳಿಕ ಇಂದು (ಮೇ 26) ಪೊಲೀಸರು ಮಡೆನೂರು ಮನುವನ್ನು 3ನೇ ಎಸಿಜೆಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲವು 14 ದಿನಗಳ ಕಾಲ ಮಡೆನೂರು ಮನುಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಯುವತಿ, ಯಾವುದೇ ಕಾರಣಕ್ಕೂ ಮನು ವಿರುದ್ಧದ ಕೇಸ್ ಹಿಂಪಡೆಯಲ್ಲ, ಆತನಿಗೆ ಕಾನೂನು ಪ್ರಕರಾ ಶಿಕ್ಷೆಯಾಗಬೇಕು ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹುಷಾರಿಲ್ಲದಿದ್ದಾಗ ಕುಡಿಸಿ ಲೈಂಗಿಕ ದೌರ್ಜನ್ಯ

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತ ಯುವತಿ, ಮನು ಹುಷಾರಿಲ್ಲದಾಗ ನನ್ನ ಮನೆಗೆ ಬಂದು ಕುಡಿಸಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ.ಮನು ಪತ್ನಿ ನನ್ನ ಪತಿಯ ವಿರುದ್ಧ ಪಿತೂರಿ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಸಂತ್ರಸ್ತೆ, ಮನು ನನ್ನ ಮನೆಗೆ ಬಂದಿದ್ದಕ್ಕೆ ಸಾಕ್ಷ್ಯಗಳಿವೆ. ನನಗೆ ಹುಷರಿಲ್ಲದಿದ್ದಾಗ ಕುಡಿಸಿ ಲೈಂಗಿಕ ದೌರ್ಜನ್ಯವೆಸಿಗಿದ್ದಾನೆ.

ನನ್ನ ಖಾಸಗಿ ವಿಡಿಯೋ ಮಾಡಿಕೊಂಡಿದ್ದಾನೆ. ಎಲ್ಲದರ ಬಗ್ಗೆಯೂ ಸಾಕ್ಷ್ಯಗಳಿವೆ. ಷಡ್ಯಂತ್ರ ಎಲ್ಲಿಂದ ಬರುತ್ತೆ? ಎಂದು ಕಿಡಿಕಾರಿದ್ದಾರೆ.ಆತ ಮಾಡಿರುವುದು ಮನೆಹಾಳು ಕೆಲಸ. ಪತ್ನಿಯಿಂದಲೇ ಆತ ಹಾಳಾಗಿರುವುದು. ಹೊರಗಡೆ ಏನ್ ಬೇಕಾದ್ರೂ ಮಾಡಿಕೋ ಎನ್ನುತ್ತಿದ್ದಳು. ಅವಳು ಹೇಳಿರುವ ಹೇಳಿಕೆಗಳು ನನ್ನ ಬಳಿ ಇದೆ. ಯಾವುದೇ ಕಾರಣಕ್ಕೂ ಕೇಸ್ ಹಿಂಪಡೆಯಲ್ಲ. ನನಗೂ ಬೆದರಿಕೆ ಹಾಕಿದ್ದಾನೆ ಕಾನೂನು ಪ್ರಕಾರ ಆತನಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular