BREAKING: ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಹಲ್ಲೆ; ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ FIR

ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಹಲ್ಲೆ ಮಾಡಿದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ ಮುಂಬೈನ ಬಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿನೋದ್ ಕಾಂಬ್ಳಿ ಪತ್ನಿ ಆಂಡ್ರಿಯ ಈ ಕುರಿತಂತೆ ದೂರು ದಾಖಲಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ 1-1.30 ಗಂಟೆ ಅವಧಿ ನಡುವೆ ಈ ಘಟನೆ ನಡೆದಿದ್ದು, ಪಾನಮತ್ತರಾಗಿ ಮನೆಗೆ ಬಂದ ವಿನೋದ್ ಕಾಂಬ್ಳಿ ಪತ್ನಿ ಜೊತೆ ಜಗಳ ತೆಗೆದಿದ್ದಾರೆ. ಬಳಿಕ ಕುಕ್ಕರ್ ಪಾನ್ ನಿಂದ ಪತ್ನಿಯ ತಲೆಗೆ ಹೊಡೆದಿದ್ದಾರೆ.

ಇದರ ಪರಿಣಾಮ ಆಕೆಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ವಿನೋದ್ ಕಾಂಬ್ಳಿ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ದಂಪತಿಯ 12 ವರ್ಷದ ಪುತ್ರ ಸಹ ಸ್ಥಳದಲ್ಲಿದ್ದ ಎನ್ನಲಾಗಿದೆ.

ವಿನೋದ್ ಕಾಂಬ್ಳಿ ವಿರುದ್ಧ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿದ್ದು, ಬಂಧನದ ಭೀತಿಯೂ ಎದುರಾಗಿದೆ. ವಿನೋದ್ ಕಾಂಬ್ಳಿ ಆಂಡ್ರಿಯಾ ಜೊತೆ 2014ರಲ್ಲಿ ಮುಂಬೈನ ಸೈಂಟ್ ಪೀಟರ್ಸ್ ಚರ್ಚ್ ನಲ್ಲಿ ವಿವಾಹವಾಗಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read