
ಕೂಡ್ಲಗಿ ಹೆಲಿ ಪ್ಯಾಡ್ ಗೆ ಆಗಮಿಸಿದ ಸಿದ್ದರಾಮಯ್ಯ, ಹೆಲಿಕಾಪ್ಟರ್ ನಿಂದ ಇಳಿದು ಜನರತ್ತ ಕೈ ಬೀಸುತ್ತಾ ಸಾಗಿ ಕಾರಿನ ಡೋರ್ ಮೇಲೆ ನಿಂತು ಜನರತ್ತ ಕೈಬೀಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲಿದ್ದ ಕಾಂಗ್ರೆಸ್ ನಾಯಕರು ತಕ್ಷಣ ಸಿದ್ದರಾಮಯ್ಯನವರನ್ನು ಬೀಳದಂತೆ ಹಿಡುದುಕೊಂಡಿದ್ದಾರೆ. ಬಳಿಕ ಸಿದ್ದರಾಮಯ್ಯನವರು ಸಾವರಿಸಿಕೊಂಡು ಕಾರಿನಲ್ಲಿ ಕುಳಿತಿದ್ದಾರೆ.
ಸ್ಥಳದಲ್ಲಿದ್ದ ವೈದ್ಯರು ಸಿದ್ದರಾಮಯ್ಯನವರಿಗೆ ಗ್ಲುಕೋಸ್ ನೀಡಿದ್ದಾರೆ. ಕೆಲಕಾಲ ಕಾರಿನಲ್ಲಿಯೇ ಕುಳಿತು ಸಿದ್ದರಾಮಯ್ಯ ವಿಶ್ರಾಂತಿ ಪಡೆದಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ, ಸಿದ್ದರಾಮಯ್ಯನವರಿಗೆ ಯಾವುದೇ ಸಮಸ್ಯೆಯಾಗಿಲ್ಲ ಅವರು ಆರೋಗ್ಯವಾಗಿಯೇ ಇದ್ದಾರೆ. ಕಾರಿನ ಡೋರ್ ಬಳಿ ಕುಸಿದು ಬಿದ್ದಿದ್ದಾರೆ ಎಂಬುದು ಸುಳ್ಳು ಎಂದಿದ್ದಾರೆ.

