ಮೈಕೆಲ್ ಜಾಕ್ಸನ್ ಅವರ ನೃತ್ಯಕ್ಕೆ ಮನಸೋಲದವರೇ ಇಲ್ಲ. ಎಲ್ಲಾ ವಯಸ್ಸಿನ ನೃತ್ಯ ಉತ್ಸಾಹಿಗಳಿಗೆ ಇವರ ನೃತ್ಯ ಸ್ಫೂರ್ತಿ. ಅವರನ್ನು ಅನುಸರಿಸುವವರು ಹಲವರು ಇದ್ದಾರೆ. ಈಗ ವೃದ್ದ ವ್ಯಕ್ತಿಯೊಬ್ಬರು ಮೈಕಲ್ ಜಾಕ್ಸನ್ ಅವರನ್ನು ಅನುಸರಿಸಿದ್ದು ಅದರ ವಿಡಿಯೋ ವೈರಲ್ ಆಗಿದೆ.
ವೈರಲ್ ವೀಡಿಯೊದಲ್ಲಿ, ವ್ಯಕ್ತಿಯು ತಮ್ಮ ಸೊಗಸಾದ ಮತ್ತು ನಿಖರವಾದ ಚಲನೆಗಳಿಂದ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಪತ್ರಕರ್ತ ಮೈಕ್ ಟಡೋವ್ ಅವರು ಭಾನುವಾರ ಟ್ವಿಟರ್‌ನಲ್ಲಿ 42 ಸೆಕೆಂಡುಗಳ ಡ್ಯಾನ್ಸ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ವಿವಾಹ ಸಮಾರಂಭ ಒಂದರಲ್ಲಿ ಮೈಕೆಲ್ ಜಾಕ್ಸನ್ ಅವರ ‘ಬಿಲ್ಲಿ ಜೀನ್’ ನೃತ್ಯಕ್ಕೆ ವ್ಯಕ್ತಿಯೊಬ್ಬರು ಹೆಜ್ಜೆ ಹಾಕಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಯಸ್ಸಿಗೆ ಮೀರಿದ ಶಕ್ತಿ ಮತ್ತು ಪರಿಪೂರ್ಣತೆಯೊಂದಿಗೆ ಅವರು ನೃತ್ಯ ಚಲನೆ ಮಾಡಿದ್ದಾರೆ. ಅಲ್ಲಿ ನೆರೆದವರು ಚಪ್ಪಾಳೆಗೈದಿದ್ದಾರೆ. ಇದರ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಮನಸ್ಸಿದ್ದರೆ ವಯಸ್ಸಿನ ಚಿಂತೆ ಇಲ್ಲ ಎಂದು ಹಲವರು ಹೇಳಿದ್ದಾರೆ.
https://twitter.com/MikeTaddow/status/1634704802822205440?ref_src=twsrc%5Etfw%7Ctwcamp%5Etweetembed%7Ctwterm%5E16347048028222
https://twitter.com/MikeTaddow/status/1634704802822205440?ref_src=twsrc%5Etfw%7Ctwcamp%5Etweetembed%7Ctwterm%5E1634839317213511680%7Ctwgr%5E09f1323093378a3592ebdb558978bda5778036c8%7Ctwcon%5Es2_&ref_url=https%3A%2F%2Fwww.news18.com%2Fbuzz%2Fbravo-bob-video-of-middle-aged-mans-stylish-dance-on-michael-jacksons-hit-goes-viral-7282777.html
https://twitter.com/MikeTaddow/status/1634704802822205440?ref_src=twsrc%5Etfw%7Ctwcamp%5Etweetembed%7Ct