ಮಾನಸಿಕ ಒತ್ತಡ ನಿವಾರಕ ಬಲುಪಯೋಗಿ ಬ್ರಾಹ್ಮಿ

ಇಂದು ಅಸ್ತವ್ಯಸ್ತವಾಗಿರುವ ನಮ್ಮ ಜೀವನಶೈಲಿಯಲ್ಲಿ ಅತಂಕ ಮತ್ತು ಒತ್ತಡಗಳು ಸಾಮಾನ್ಯ ಸಮಸ್ಯೆ ಎಂಬಂತಾಗಿದೆ. ಹಾಗಿದ್ದರೆ ಆಯುರ್ವೇದದಲ್ಲಿ ಇದಕ್ಕಿರುವ ಔಷಧಗಳ ಬಗ್ಗೆ ತಿಳಿಯೋಣ.

ಒತ್ತಡವನ್ನು ಕಡಿಮೆ ಮಾಡಲು ಬ್ರಾಹ್ಮಿ ಬಲುಪಯೋಗಿ. ಇದು ನಿಮ್ಮ ಮೆದುಳಿನ ಕೋಶಗಳು ಪುನರುಜ್ಜೀವನ ಗೊಳ್ಳುವಂತೆ ಮಾಡುತ್ತದೆ ಹಾಗೂ ನರಮಂಡಲದ ಮೇಲೆ ಹಿತವಾದ ಪರಿಣಾಮಗಳು ಬೀರುತ್ತವೆ. ಇದರ ಎಣ್ಣೆ ಮಾಡಿ ತಲೆಗೆ ಮಸಾಜ್ ಮಾಡಿ ಕೊಳ್ಳುವುದು, ಹಾಗೇ ಸೇವಿಸುವುದರಿಂದ ಕೂಡ ಪರಿಣಾಮಕಾರಿಯಾಗಿದೆ.

ಭೃಂಗರಾಜ್ ಕೂಡಾ ನಿಮ್ಮ ದೇಹವನ್ನು ಶಾಂತಗೊಳಿಸುತ್ತದೆ. ಇದು ಮೆದುಳಿಗೆ ನಿರಂತರ ಅಮ್ಲಜನಕ ಪೂರೈಕೆ ಮಾಡುವ ಮೂಲಕ ನಿಮ್ಮ ಮನಸ್ಸು ಹಾಗೂ ದೇಹವನ್ನು ಶಾಂತವಾಗಿ ಇಡುತ್ತದೆ.

ಜಟಮಾಸಿ ಒತ್ತಡ ವಿರೋಧಿ ಮತ್ತು ಅಯಾಸ ಪರಿಹರಿಸುವ ಗುಣಗಳನ್ನು ಹೊಂದಿದೆ.

ಅಶ್ವಗಂಧ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ನಿದ್ರೆಯನ್ನು ಉತ್ತೇಜಿಸುತ್ತದೆ. ಇದು ಅಮೈನೋ ಅಮ್ಲಗಳು ಮತ್ತು ಜೀವಸತ್ವಗಳ ಸಂಯೋಜನೆಯಾಗಿದೆ.

ವಾಚಾ ಎಂಬ ಮೂಲಿಕೆ ವಿವಿಧ ಮಾನಸಿಕ ಅಸ್ವಸ್ಥತೆಗಳನ್ನು ನಿವಾರಿಸುವ ಗುಣವನ್ನು ಹೊಂದಿದೆ. ಹಾಗಾಗಿ ಆಯುರ್ವೇದದ ಈ ಔಷಧಗಳ ಮೂಲಕ ನಿಮ್ಮ ಆರೋಗ್ಯವನ್ನು ಮತ್ತಷ್ಟು ಸ್ಥಿರಗೊಳಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read