ಹಾಸನ: ಪ್ರಸಿದ್ಧ ಹಾಸನಾಂಬೆ ದೇಗುಲದ ಬಾಗಿಲು ತೆರೆದಿದ್ದು, ಅಕ್ಟೋಬರ್ 23ರವರೆಗೂ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ. ಈ ನಡುವೆ ಖ್ಯಾತ ಜ್ಯೋತಿಷಿ ಬ್ರಹ್ಮಾಂಡ ಗುರೂಜಿ ಹಾಸನಾಂಬೆ ದೇಗುಲದ ಬಗ್ಗೆ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ.
ಹಾಸನಾಂಬೆ ದರ್ಶನ ಈ ವರ್ಷವೇ ಕೊನೆ. ಹಾಸನಾಂಬೆ ದರ್ಶನಕ್ಕೆ ಈ ವರ್ಷವೇ ಕೊನೇ ಅವಕಾಶ. ಮುಂದಿನ ವರ್ಷದಿಂದ ಅಮ್ಮನವರ ಸಾನ್ನಿಧ್ಯ ಇಲ್ಲಿ ಇರುವುದಿಲ್ಲ ಎಂದು ಬ್ರಹ್ಮಾಂಡ ಗುರೂಜಿ ಹೇಳಿಕೆ ನೀಡಿದ್ದಾರೆ.
ಹಾಸನಾಂಬೆ ದರ್ಶನಕ್ಕೆ ಮುಂದಿನ ದಿನಗಳಲ್ಲಿ ಅಡಚಣಿ ಉಂಟಾಗುವ ಸಾಧ್ಯತೆ ಇದೆ. 2025ರಿಂದ 2032ರ ಅವಧಿಯಲ್ಲಿ ಸಿದ್ದೇಶ್ವರನ ಕೃಪೆಯಿಂದ ಘಟಪ್ರಭ ಪರಿವರ್ತನೆ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಈ ಸಮಯದಲ್ಲಿ 7 ಜನ ಅಕ್ಕ-ತಂಗಿಯರು ಸೇರಲಿದ್ದಾರೆ. ಈ ಕೊನೆಯ ಅವಧಿಯಲ್ಲಿ ದರ್ಶನ್ ಪಡೆದವರು ಸಂತೋಷ ಪಡುತ್ತಾರೆ ಎಂದು ತಿಳಿಸಿದ್ದಾರೆ.
ಸಿದ್ದೇಶ್ವರ ಕೃಪಾಶಿರ್ವಾದದಿಂದ ಮುಂದಿನ ದಿನಗಳಲ್ಲಿ ಮಹತ್ವದ ಬದಲಾವಣೆಗಳು ಆಗಲಿವೆ. ರೇವಣ ಸಿದ್ದೇಶ್ವರ, ಹಾಸನದ ಸಿದ್ದೇಶ್ವರ, ಜೇನುಕಲ್ ಸಿದ್ದೇಶ್ವರ ಸೇರಿದಂತೆ ವಿವಿಧ ಸಿದ್ದೇಶ್ವರರ ಶಿವನ ಶಕ್ತಿ ಒಂದು ಕಡೆ ಸೇರಲಿದೆ. ವಿಶೇಷವಾಗಿ 2025ರಿಂದ 2032ರ ಅವಧಿಯಲ್ಲಿ ಈ ಬದಲಾವಣೆಗಳು ಘಟಿಸಲಿವೆ. ಸಿದ್ದೇಶ್ವರ ಸಾನ್ನಿಧ್ಯ ತೆಗೆದಾಗ ಇಲ್ಲಿ ಸೇರುವ 7 ಜನ ಅಕ್ಕ-ತಂಗಿಯರು ಸೇರಿ ಘಟಪ್ರಭ ಪರಿವರ್ತನೆ ಎಂಬ ದೊಡ್ಡ ಬದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.