ಶಿಕ್ಷಕನ ಅಪಹರಿಸಿ ಬಲವಂತದ ಮದುವೆ; ತಾಳಿ ಕಟ್ಟುವ ವೇಳೆ ಬಿಕ್ಕಿಬಿಕ್ಕಿ ಅತ್ತ ವರ | Watch Video

ಅಪಹರಿಸಿ ಬಲವಂತವಾಗಿ ಮದುವೆ ಮಾಡುವುದು ಬಿಹಾರದ ಕೆಲವೆಡೆ ಕಂಡು ಬರುತ್ತದೆ. ಇಂತಹ ಸಂದರ್ಭಗಳಲ್ಲಿ ಬಂದೂಕುಗಳಿಂದ ಅವರನ್ನು ಬೆದರಿಸಿ ‘ಪಕದ್ವಾ ವಿವಾಹ’ ಅಥವಾ ಬಲವಂತದ ಮದುವೆ ಮಾಡಿಸಲಾಗುತ್ತದೆ.

ಅಂತಹ ಇನ್ನೊಂದು ನಿದರ್ಶನದಲ್ಲಿ, ಡಿಸೆಂಬರ್ 13, ಶುಕ್ರವಾರದಂದು ಬಿಹಾರದ ಬೆಗುಸರಾಯ್‌ನ ಕತಿಹಾರ್‌ನಲ್ಲಿ ಸರ್ಕಾರಿ ಬಿಪಿಎಸ್‌ಸಿ ಶಿಕ್ಷಕನನ್ನು ಅಪಹರಿಸಿ, ಹಲ್ಲೆ ನಡೆಸಿ, ಹುಡುಗಿಯೊಂದಿಗೆ ಬಲವಂತವಾಗಿ ಮದುವೆ ಮಾಡಿಸಲಾಗಿದ್ದು, ಈ ವೇಳೆ ವರ ಅಳುತ್ತಿರುವ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅವ್ನಿಶ್ ಕುಮಾರ್ ಎಂಬ ಈ ಶಿಕ್ಷಕ ಇ-ರಿಕ್ಷಾದಲ್ಲಿ ಅವರು ಕೆಲಸ ಮಾಡುವ ಶಾಲೆಗೆ ಹೋಗುತ್ತಿದ್ದಾಗ ಎರಡು ಸ್ಕಾರ್ಪಿಯೋಗಳಲ್ಲಿ ಬಂದ ಹನ್ನೆರಡು ಜನರು ಬಂದೂಕು ತೋರಿಸಿ ಅವರನ್ನು ಅಪಹರಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ವರದಿಗಳ ಪ್ರಕಾರ, ಅವರು ನಾಲ್ಕು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಆದರೆ ಮದುವೆಯಾಗಿರಲಿಲ್ಲ.

ಲಖಿಸರಾಯ್ ಜಿಲ್ಲೆಯ ಯುವತಿ ಗುಂಜನ್ ತಾನು ಮತ್ತು ಕುಮಾರ್ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದಾಳೆ ಮತ್ತು ಆಗಾಗ್ಗೆ ಒಟ್ಟಿಗೆ ಹೋಟೆಲ್‌ ಹಾಗೂ ಕತಿಹಾರ್‌ನಲ್ಲಿರುವ ಅವನೀಶ್‌ನ ಮನೆಗೆ ಭೇಟಿ ನೀಡಿದ್ದಳು ಎನ್ನಲಾಗಿದೆ.

ಗುಂಜನ್ NDTV ಗೆ ಅವ್ನಿಶ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ, ಆದರೆ ಈ ವಿಷಯವನ್ನು ಆಕೆ ತನ್ನ ಕುಟುಂಬಕ್ಕೆ ತಿಳಿಸಿದ ನಂತರ ಅವನು ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದ ಎಂದಿದ್ದಾಳೆ.

ಬಲವಂತದ ಮದುವೆಗೆ ಮೂರು ದಿನಗಳ ಮೊದಲು ಆತನನ್ನು ಗುಂಜನ್ ಮನೆಯವರು ಹಿಡಿದು ಪ್ರಶ್ನಿಸಿದ್ದು, ತಾವಿಬ್ಬರು ಸಂಬಂಧದಲ್ಲಿರುವುದನ್ನು ಅವ್ನಿಶ್ ನಿರಾಕರಿಸಿದ್ದ.

ಆದಾಗ್ಯೂ, ಬಲವಂತದ ಸಮಾರಂಭದ ನಂತರ ಗುಂಜನ್ ತನ್ನ ಕುಟುಂಬದೊಂದಿಗೆ ರಾಜೌರಾದಲ್ಲಿರುವ ಅವ್ನಿಶ್ ಮನೆಗೆ ಹೋದಾಗ ವಿಷಯ ಮತ್ತೊಂದು ತಿರುವು ಪಡೆದಿದೆ. ಅವ್ನಿಶ್ ಕುಟುಂಬ, ಗುಂಜನ್‌ ಳನ್ನು ಸೊಸೆಯಾಗಿ ಸ್ವೀಕರಿಸಲು ನಿರಾಕರಿಸಿದೆ.

ಮತ್ತೊಂದೆಡೆ, ಅವ್ನಿಶ್ ಇದೆಲ್ಲವನ್ನೂ ನಿರಾಕರಿಸಿದ್ದು, ತಾವಿಬ್ಬರು ಪ್ರಣಯ ಸಂಬಂಧದಲ್ಲಿರಲಿಲ್ಲ ಎಂದು NDTV ಗೆ ತಿಳಿಸಿದ್ದಾನೆ. ಗುಂಜನ್ ತನ್ನನ್ನು ಹಿಂಬಾಲಿಸುತ್ತಿದ್ದು, ತನ್ನೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದಾಳೆ ಎಂದು ಹೇಳಿದ್ದಾನೆ. ಈ ಸಂಬಂಧ ಗುಂಜನ್ ಮತ್ತು ಅವ್ನೀಶ್ ಈಗ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read