BIG NEWS : ಸ್ವಂತ ಕಾರು ಇದ್ದವರ ‘BPL ಕಾರ್ಡ್’ ರದ್ದಾಗುವುದಿಲ್ಲ’ : ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟನೆ

ಬೆಂಗಳೂರು : ಸ್ವಂತ ಕಾರು ಇದ್ದವರ ‘BPL’ ಕಾರ್ಡ್ ರದ್ದಾಗಲಿದೆ ಎಂದು ಹೇಳಲಾಗಿತ್ತು, ಈ ಹಿನ್ನೆಲೆ ಕಾರು ಹೊಂದಿದವರಿಗೆ ತಮ್ಮ ಬಿಪಿಎಲ್ ಕಾರ್ಡ್ ರದ್ದಾಗಲಿದೆ ಎಂಬ ಆತಂಕ ಶುರುವಾಗಿತ್ತು. ಈ ಆತಂಕದಲ್ಲಿರುವ ಜನರಿಗೆ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಕೆ.ಹೆಚ್ ಮುನಿಯಪ್ಪ ಸ್ವಂತ ಕಾರು ಇದ್ದವರ ‘BPL’ ಕಾರ್ಡ್ ರದ್ದಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಸಣ್ಣ ಕಾರುಗಳನ್ನು ಹೊಂದಿರುತ್ತಾರೆ, ಈ ನಿಯಮದ ಬಗ್ಗೆ ಮರುಚಿಂತನೆ ಮಾಡಲು ಪ್ರಸ್ತಾಪವನ್ನು ಸರ್ಕಾರದ ಮುಂದಿಡಲಿದ್ದೇವೆ. ಈ ತಕ್ಷಣ ಅವರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುತ್ತೇವೆ ಎಂದು ಹೇಳಿಲ್ಲ ಎಂದರು. BPL ರೇಷನ್ ಕಾರ್ಡ್ ಹೊಂದಿರುವವರು ವೈಟ್ ಬೋರ್ಡ್ ವಾಹನಗಳನ್ನು ಹೊಂದಿದ್ದರೆ ಅವರ ರೇಷನ್ ಕಾರ್ಡ್ ಗಳು ರದ್ದಾಗುತ್ತವೆ ಎಂಬ ಮಾನದಂಡ 2016ರ BPL ರೇಷನ್ ಕಾರ್ಡ್ ನಲ್ಲಿ ಇದೆ ಎಂದರು.  ಸೋಶಿಯಲ್  ಮೀಡಿಯಾದಲ್ಲಿ ಈ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಈ ಹಿನ್ನೆಲೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಕಾರು ಇದ್ದರೂ ಅರ್ಹತೆ ಹೊಂದಿದವರಿಗೆ ಬಿಪಿಎಲ್ ಕಾರ್ಡ್ ನೀಡುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಯಾರು ಅರ್ಹರಿರುತ್ತಾರೋ ಅವರಿಗೆ ಪರಿಶೀಲನೆ ಮಾಡಿ ಬಿಪಿಎಲ್ ಕಾರ್ಡ್ ಕೊಡಲಿದ್ದೇವೆ, ಯಾವುದೇ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ. ಕೆಲವರ ಬ್ಯಾಂಕ್ ಖಾತೆ ಇಲ್ಲದ ಕಾರಣ ಪಡಿತರ ಚೀಟಿ ರದ್ದಾಗಿತ್ತು. 3 ತಿಂಗಳಲ್ಲಿ ಅರ್ಹರಿಗೆ ಬಿಪಿಎಲ್, ಎಪಿಎಲ್ ಕಾರ್ಡ್ ವಿತರಿಸಲಿದ್ದೇವೆ’ ಎಂದು ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read