HomeIndiaಎರಡನೇ ಪತ್ನಿ ಮಾತು ಕೇಳಿ ಮೊದಲ ಪತ್ನಿ ಮಗನಿಗೆ ಬರೆ ಹಾಕಿದ ತಂದೆ ಅರೆಸ್ಟ್

ಎರಡನೇ ಪತ್ನಿ ಮಾತು ಕೇಳಿ ಮೊದಲ ಪತ್ನಿ ಮಗನಿಗೆ ಬರೆ ಹಾಕಿದ ತಂದೆ ಅರೆಸ್ಟ್

ಒಡಿಶಾದ ಅಂಗುಲ್‌ ನಲ್ಲಿ ಶಾಲೆಗೆ ಹೋಗದ ಕಾರಣ ಮಗನಿಗೆ ಬಿಸಿ ಕಬ್ಬಿಣದಿಂದ ಬರೆ ಹಾಕಿದ ತಂದೆಯನ್ನು ಬಂಧಿಸಲಾಗಿದೆ.

ಶಾಲೆಗೆ ಹೋಗಲಿಲ್ಲ ಎಂಬ ಕಾರಣಕ್ಕೆ ತಂದೆ ತನ್ನ 12 ವರ್ಷದ ಮಗನಿಗೆ ಕಾದ ಕಬ್ಬಿಣದಿಂದ ಬರೆ ಹಾಕಿದ್ದರಿಂದ ಬಾಲಕನ ಸ್ಥಿತಿ ಗಂಭೀರವಾಗಿದೆ. ಎರಡನೇ ಪತ್ನಿಯ ಪ್ರಚೋದನೆಯಿಂದ ಬಾಲಕನಿಗೆ ಬೈದಾಡಿದ ತಂದೆ ಇಂತಹ ಕ್ರೌರ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಘಾತಕಾರಿ ಘಟನೆ ಚೆಂಡಿಪಾಡಾದಲ್ಲಿ ನಡೆದಿದೆ. ಹುಡುಗನಿಗೆ ಅವನ ತಂದೆ ಸುಭಾಷ್ ಪ್ರಧಾನ್ ಚಿತ್ರಹಿಂಸೆ ನೀಡಿದ್ದರು. ಅಪ್ರಾಪ್ತ ಬಾಲಕನಿಗೆ ಆತನ ತಂದೆ ಸುಭಾಷ್ ಮತ್ತು ಮಲತಾಯಿ ಚಿತ್ರಹಿಂಸೆ ನೀಡುತ್ತಿರುವುದು ಇದೇ ಮೊದಲಲ್ಲ. ಅಪ್ರಾಪ್ತ ಬಾಲಕನ ಅಜ್ಜಿ ಆರಂಭದಲ್ಲಿ ಸ್ಥಳೀಯ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದು, ಅವರು ಚೈಲ್ಡ್‌ ಲೈನ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಚೈಲ್ಡ್‌ಲೈನ್ ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿ ಅಪ್ರಾಪ್ತ ಬಾಲಕನನ್ನು ರಕ್ಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸುಭಾಷ್ ಮತ್ತು ಅವರ ಎರಡನೇ ಪತ್ನಿ ಇಬ್ಬರನ್ನೂ ಚೆಂಡಿಪದ ಪೊಲೀಸರು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular