HomeIndiaBREAKING NEWS: ಜಲಮಂಡಳಿ ಘಟಕದ ಬೋರ್ ವೆಲ್ ಗೆ ಬಿದ್ದ ಮಗು

BREAKING NEWS: ಜಲಮಂಡಳಿ ಘಟಕದ ಬೋರ್ ವೆಲ್ ಗೆ ಬಿದ್ದ ಮಗು

ನವದೆಹಲಿ: 40 ಅಡಿ ಆಳದ ಬೋರ್ ವೆಲ್ ಗೆ ಮಗು ಬಿದ್ದಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ಕೇಶೋಪುರ ಮಂಡಿಯಲ್ಲಿರುವ ಜಲ ಮಂಡಳಿ ಘಟಕದಲ್ಲಿದ್ದ ಬೋರ್ ವೆಲ್ ಗೆ ಮಗು ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಘಟನಾ ಸ್ಥಳಕ್ಕೆ ಎನ್ ಡಿ ಆರ್ ಎಫ್, ಅಗ್ನಿಶಾಮಕ ದಳ, ಪೊಲೀಸರು ದೌಡಾಯಿಸಿ ಮಗುವನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ.

ಸುಮಾರು 40 ಅಡಿ ಆಳದ ಬೋರ್ ವೆಲ್ ಇದಾಗಿದ್ದು, ಆಕಸ್ಮಿಕವಾಗಿ ಮಗು ಬಿದ್ದಿದೆ. ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯುವ ನಿಟ್ಟಿನಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular