ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ದೆಹಲಿಯ 20 ಕಾಲೇಜುಗಳಿಗೆ ಮತ್ತೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಬಂದಿದೆ.
ಚಾಣಕ್ಯಪುರಿಯ ಜೀಸಸ್ ಮತ್ತು ಮೇರಿ ಕಾಲೇಜು ಸೇರಿದಂತೆ ಸುಮಾರು 20 ಕಾಲೇಜುಗಳಿಗೆ ಬೆದರಿಕೆ ಸಂದೇಶಗಳು ಬಂದಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳು (DFS) ತಿಳಿಸಿವೆ.
ಬುಧವಾರ ಬೆದರಿಕೆ ಇಮೇಲ್ ಬಂದಿದ್ದು, ಸಂಪೂರ್ಣ ಪರಿಶೀಲನೆಯ ನಂತರ ಅದು ಹುಸಿ ಬೆದರಿಕೆ ಎಂದು ಧೃಡಪಡಿಸಲಾಗಿದೆ. ಕಳೆದ ವಾರವಷ್ಟೇ, ದೆಹಲಿಯಾದ್ಯಂತ 100 ಕ್ಕೂ ಹೆಚ್ಚು ಶಾಲೆಗಳಿಗೆ ಐದು ದಿನಗಳಲ್ಲಿ ಬಾಂಬ್ ಬೆದರಿಕೆಗಳು ಬಂದವು, ಅವೆಲ್ಲವೂ ನಂತರ ಸುಳ್ಳು ಎಚ್ಚರಿಕೆಗಳೆಂದು ಕಂಡುಬಂದಿದೆ.