ಮೈಸೂರು : ಮೈಸೂರು ದಸರಾಗೆ ಬಲೂನ್ ಮಾರಲು ಬಂದಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬಾಲಕಿಯ ದೇಹದ ಮೇಲೆ ಬಟ್ಟೆ ಇಲ್ಲದೇ ಇರುವ ಕಾರಣ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ದಸರಾ ಹಬ್ಬದಲ್ಲಿ ಬಲೂನ್ ಮಾರಾಟ ಮಾಡಲು ಬಾಲಕಿ ಹಾಗೂ ಕುಟುಂಬ ಹೊಟ್ಟೆಪಾಡಿಗಾಗಿ ಕಲಬುರಗಿಯಿಂದ ಮೈಸೂರಿಗೆ ಬಂದಿದ್ದರು. ಬಲೂನ್ ವ್ಯಾಪಾರ ಮಾಡಿ ಬಾಲಕಿ ತನ್ನ ತಂದೆ-ತಾಯಿ ಜೊತೆ ಟೆಂಟ್ ನಲ್ಲಿ ಮಲಗಿದ್ದಳು. ಆದರೆ ಬೆಳಗ್ಗೆ ಬಾಲಕಿ ನಾಪತ್ತೆಯಾಗಿದ್ದಳು. ನಂತರ ಹುಡುಕಾಡಿದಾಗ ಮಣ್ಣಿನ ಗುಡ್ಡೆಯೊಂದರಲ್ಲಿ ಬಾಲಕಿ ಶವ ಪತ್ತೆಯಾಗಿತ್ತು.
ಮೈಸೂರು ನಗರದ ವಸ್ತು ಪ್ರದರ್ಶನ ಮುಂಭಾಗ ಬಾಲಕಿ ಶವ ಪತ್ತೆಯಾಗಿದೆ .ಮೈಸೂರಿನ ನಜರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ಜಾಗದಲ್ಲಿ ಮೊನ್ನೆ ವೆಂಕಟೇಶ್ ಎಂಬುವವರ ಕೊಲೆಯಾಗಿತ್ತು.