HomeKarnatakaBREAKING: ಬಿಎಂಟಿಸಿ ಬಸ್ ವಿಂಡೋ ಗಾಜು ಧ್ವಂಸಗೊಳಿಸಿ ಚಾಲಕನ ಮೇಲೆ ಹಲ್ಲೆ: ಮೆಕಾನಿಕ್ ವಶಕ್ಕೆ

BREAKING: ಬಿಎಂಟಿಸಿ ಬಸ್ ವಿಂಡೋ ಗಾಜು ಧ್ವಂಸಗೊಳಿಸಿ ಚಾಲಕನ ಮೇಲೆ ಹಲ್ಲೆ: ಮೆಕಾನಿಕ್ ವಶಕ್ಕೆ

ಬೆಂಗಳೂರು: ವಾಹನಕ್ಕೆ ಬಿಎಂಟಿಸಿ ಬಸ್ ಟಚ್ ಆಗಿದೆ ಎಂದು ಬೆಂಗಳೂರಿನ ಕಾರ್ಪೊರೇಷನ್ ಬಳಿ ಮೆಕಾನಿಕ್ ಮುಜಾಹಿದ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ.

ಹಿಂದಿನಿಂದ ಬಂದ ಬಸ್ ಟಚ್ ಆಗಿದೆ ಎಂದು ಮುಜಾಹಿದ್ ಪ್ರಶ್ನಿಸಿದ್ದು, ಈ ವೇಳೆ ಬಸ್ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಂತರ ಕೋಪಗೊಂಡ ಬೈಕ್ ಸವಾರ ಮುಜಾಹಿದ್  ಹಿಂದಿನಿಂದ ಬಿಎಂಟಿಸಿ ಬಸ್ ಚೇಸ್ ಮಾಡಿಕೊಂಡು ಬಂದು ಚಾಲಕನ ಪಕ್ಕಕ್ಕೆ ಬಂದು ಬಸ್ ವಿಂಡೋ ಗಾಜು ದ್ವಂಸಗೊಳಿಸಿ ಹಲ್ಲೆ ಮಾಡಿದ್ದಾನೆ.

ಚಾಲಕನಿಗೆ ಹಲ್ಲೆ ಮಾಡುವಾಗ ಸುತ್ತು ಬರೆದ ಜನ ಸವಾರನನ್ನು ಥಳಿಸಿದ್ದಾರೆ. ಬಸ್ ಚಾಲಕ ಎಸ್.ಜೆ. ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಜಾಹಿದ್ ನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸಿದ್ದಾರೆ. ಬಸ್ ಚಾಲಕನೆ ಮೊದಲು ಡಿಕ್ಕಿ ಹೊಡೆದು ಬೈದಾಡಿದ್ದು, ನಂತರ ತಾನು ಗಾಜು ಧ್ವಂಸಗೊಳಿಸಿರುವುದಾಗಿ ಸವಾರ ಹೇಳಿದ್ದಾನೆ. ಬಿಎಂಟಿಸಿ ಬಸ್ ಮತ್ತು ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಸ್.ಜೆ. ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular