HomeLatest NewsALERT : 'BMTC' ಬಸ್ ಚಾಲಕರೇ ಎಚ್ಚರ : ಚಾಲನೆ ವೇಳೆ ಮೊಬೈಲ್ ಬಳಸಿದ್ರೆ ಏನೇನು...

ALERT : ‘BMTC’ ಬಸ್ ಚಾಲಕರೇ ಎಚ್ಚರ : ಚಾಲನೆ ವೇಳೆ ಮೊಬೈಲ್ ಬಳಸಿದ್ರೆ ಏನೇನು ಶಿಕ್ಷೆ ಇದೆ ಗೊತ್ತೇ..?

ಬೆಂಗಳೂರು : ವಾಹನಗಳನ್ನ ಚಲಾಯಿಸುವಾಗ ಮೊಬೈಲ್ ಬಳಸೋದು ಅಪರಾಧ ಎಂದು ಗೊತ್ತಿದ್ದರೂ ಸಾರಿಗೆ ಬಸ್ ಚಾಲಕರು ಪದೇ ಪದೇ ತಪ್ಪು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಚ್ಚೆತ್ತ ಬಿಎಂಟಿಸಿ ಕಠಿಣ ಕ್ರಮ ಕೈಗೊಂಡಿದೆ . ಇನ್ಮುಂದೆ ಈ ತಪ್ಪು ಮಾಡಿದರೆ ಶಿಕ್ಷೆ ಗ್ಯಾರೆಂಟಿ ಎಂದು ಎಚ್ಚರಿಸಿದೆ.

ಚಾಲನೆ ವೇಳೆ ಮೊಬೈಲ್ ಬಳಸಿದ್ರೆ, ಚಾಟ್ ಮಾಡಿದ್ರೆ, ಹೆಡ್ ಫೋನ್ ಬಳಸಿದ್ರೆ ಶಿಕ್ಷೆ ನೀಡಲು ತೀರ್ಮಾನಿಸಲಾಗಿದೆ. ಮೊದಲನೇ ಬಾರಿ ತಪ್ಪು ಮಾಡಿದ್ರೆ 15 ದಿನಗಳ ಅಮಾನತು, ಶಿಸ್ತು ಕ್ರಮ ( ನಿಯಮ -23) ವೇತನ 5000 ರೂ ಕಡಿತ ಹಾಗೂ ಅಮಾನತು ತೆರವು ಬಳಿಕ ಬೇರೆ ಘಟಕಕ್ಕೆ ವರ್ಗಾವಣೆ.

2 ನೇ ಬಾರಿ ತಪ್ಪು ಮಾಡಿದ್ರೆ 15 ದಿನಗಳ ಅಮಾನತು, ಶಿಸ್ತು ಕ್ರಮ ( ನಿಯಮ -23) , ವರ್ಗಾವಣೆ , ವಾರ್ಷಿಕ ಬಡ್ತಿ 1 ವರ್ಷಕ್ಕೆ ತಡೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

3 ನೇ ಬಾರಿ ತಪ್ಪು ಮಾಡಿದ್ರೆ 15 ದಿನಗಳ ಅಮಾನತು, ಶಿಸ್ತು ಕ್ರಮ, ವರ್ಗಾವಣೆ , ವಾರ್ಷಿಕ ಬಡ್ತಿ 2 ವರ್ಷಕ್ಕೆ ತಡೆ ಅಥವಾ 10,000 ಕಡಿತ

4 ನೇ ಬಾರಿ ತಪ್ಪು ಮಾಡಿದ್ರೆ 15 ದಿನಗಳ ಅಮಾನತು, ಶಿಸ್ತು ಕ್ರಮ, ವರ್ಗಾವಣೆ , ಶಾಶ್ವತ ಬಡ್ತಿ ಇಳಿಕೆ/ 2 ವರ್ಷ ತಡೆ ಅಥವಾ 20,000 ಕಡಿತ

5 ನೇ ಬಾರಿ ತಪ್ಪು ಮಾಡಿದ್ರೆ 15 ದಿನಗಳ ಅಮಾನತು, ಶಿಸ್ತು ಕ್ರಮ, ವರ್ಗಾವಣೆ , ಶಾಶ್ವತ ಬಡ್ತಿಗೆ ಶಾಶ್ವತ ತಡೆ ಅಥವಾ 25.000 ರೂ ಕಡಿತವಾಗುವ ಸಾಧ್ಯತೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular