HomeKarnatakaಬಿಡದಿ ಟೌನ್ ಶಿಪ್ ವಿವಾದ: ಭೂಸ್ವಾಧಿನಕ್ಕೆ ಹೈಕೋರ್ಟ್ ನಿಂದ ಯಾವುದೇ ತಡೆ ಇಲ್ಲ: BMRDA ಸ್ಪಷ್ಟನೆ

ಬಿಡದಿ ಟೌನ್ ಶಿಪ್ ವಿವಾದ: ಭೂಸ್ವಾಧಿನಕ್ಕೆ ಹೈಕೋರ್ಟ್ ನಿಂದ ಯಾವುದೇ ತಡೆ ಇಲ್ಲ: BMRDA ಸ್ಪಷ್ಟನೆ

ಬೆಂಗಳೂರು: ಬಿಡದಿ ಟೌನ್ ಶಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸಂಪೂರ್ಣ ತಡೆಯಜ್ಞೆ ನೀಡಿದೆ ಎಂಬುದನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ನಿರಾಕರಿಸಿದೆ.

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಅಡಿ ಬಿಡದಿ ಟೌನ್​ಶಿಪ್​ಗೆ ಹೈಕೋರ್ಟ್ ಸಂಪೂರ್ಣ ತಡೆಯಾಜ್ಞೆ ನೀಡಿದೆ ಎಂಬ ವಾದವನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ತಳ್ಳಿಹಾಕಿದೆ. ಭೂಸ್ವಾಧೀನ ಪ್ರಕ್ರಿಯೆಗೆ ಯಾವುದೇ ಸಾಮಾನ್ಯ ತಡೆಯಾಜ್ಞೆ ಇಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಯೋಜನೆಗೆ ಬ್ಲಾಂಕೆಟ್ ಸ್ಟೇ ನೀಡಿಲ್ಲ, ಇಡೀ ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಳ್ಳುವುದಿಲ್ಲ ಎಂದು ಆಗಸ್ಟ್ 25ರಂದು ನಡೆದ ವಿಚಾರಣೆಯಲ್ಲಿ ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದಾಗ್ಯೂ, ಭೂಸ್ವಾಧೀನ ಕ್ರಮವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿರುವ ಕೆಲ ಭೂಮಾಲೀಕರ ಜಮೀನುಗಳಿಗೆ ಮಾತ್ರ ಪ್ರತ್ಯೇಕ ಕಾನೂನು ರಕ್ಷಣೆ ನೀಡಲಾಗಿದೆ. ಈ ಜಮೀನುಗಳ ಕುರಿತು ಮುಂದಿನ ಕ್ರಮಗಳು ಹೈಕೋರ್ಟ್ ನಿರ್ದೇಶನಕ್ಕೆ ಒಳಪಟ್ಟಿರುತ್ತವೆ. ಅರ್ಜಿದಾರರ ಜಮೀನುಗಳನ್ನು ತಕ್ಷಣ ವಶಕ್ಕೆ ಪಡೆಯಲು ಪ್ರಾಧಿಕಾರಕ್ಕೆ ಅವಕಾಶವಿಲ್ಲ. ಆದರೆ, ಜಮೀನಿನ ಮೌಲ್ಯದ ಜೊತೆಗೆ ಮರ, ಬೆಳೆ, ಬಾವಿ, ಕಟ್ಟಡ ಮತ್ತು ಇತರ ಆಸ್ತಿಗಳಿಗೂ ಪರಿಹಾರ ನೀಡುವಂತೆ, ಅನ್ವಯವಾಗುವ ಭೂಸ್ವಾಧೀನ ಕಾನೂನಿನ ಅಡಿಯಲ್ಲೇ ಪರಿಹಾರ ಅವಾರ್ಡ್ ಸಿದ್ಧಪಡಿಸಿ ಹೈಕೋರ್ಟ್​ಗೆ ಸಲ್ಲಿಸಲು ಪ್ರಾಧಿಕಾರಕ್ಕೆ ಸೂಚಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular