HomeKarnatakaNamma Metro; 1, 3 ಮತ್ತು 5 ದಿನದ ನಮ್ಮ ಮೆಟ್ರೋ ಪಾಸು ಬಿಡುಗಡೆ

Namma Metro; 1, 3 ಮತ್ತು 5 ದಿನದ ನಮ್ಮ ಮೆಟ್ರೋ ಪಾಸು ಬಿಡುಗಡೆ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಪ್ರಯಾಣಿಕರಿಗೆ ಬಂಪರ್ ಕೊಡುಗೆ ನೀಡಿದೆ. ಜನವರಿ 15 ರಿಂದ ಜಾರಿಗೆ ಬರುವಂತೆ ಬಿಎಂಆರ್‌ಸಿಎಲ್ ಮೊಬೈಲ್ ಕ್ಯೂಆರ್ ಆಧಾರಿತ 1, 3 ಮತ್ತು 5 ದಿನಗಳ ಅನಿಯಮಿತ ಪ್ರಯಾಣದ ಪಾಸ್ ಪರಿಚಯಿಸಲಿದೆ.

ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುವ ಹಾಗೂ ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದಿಂದ ಮೊಬೈಲ್ ಕ್ಯೂಆರ್ ಆಧಾರಿತವಾದ ಅನಿಯಮಿತ ಪ್ರಯಾಣ ಪಾಸ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಇದುವರೆಗೆ ಅನಿಯಮಿತ ಪುಯಾಣ ಪಾಸ್‌ಗಳು, ಕೇವಲ ಕಾಂಟ್ಯಾಕ್ಟ್‌ಲೆಸ್ ಸ್ಮಾರ್ಟ್ ಕಾರ್ಡ್‌ಗಳ ಮೂಲಕವೇ ಲಭ್ಯವಾಗುತ್ತಿದ್ದು, 150 ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ಮೊಬೈಲ್ QR ಕೋಡ್ ಪಾಸ್‌ಗಳ ಪರಿಚಯದೊಂದಿಗೆ ಪಾಸ್‌ಗಳು ಮೊಬೈಲ್ ಫೋನ್‌ಗಳಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುವುದರಿಂದ ಪ್ರಯಾಣಿಕರಿಗೆ ಯಾವುದೇ ಭದ್ರತಾ ಠೇವಣಿ ಪಾವತಿಸುವ ಅಗತ್ಯವಿರುವುದಿಲ್ಲ.

ಮೊಬೈಲ್ QR ಪಾಸ್‌ಗಳ ವೈಶಿಷ್ಟ್ಯಗಳು

  • ಭದ್ರತಾ ಠೇವಣಿ ಅಗತ್ಯವಿಲ್ಲ. ಸ್ಮಾರ್ಟ್ ಕಾರ್ಡ್‌ಗಳಿಗೆ ಅಗತ್ಯವಿದ್ದ 750 ಠೇವಣಿ ಡಿಜಿಟಲ್ QR ಪಾಸ್‌ಗಳಿಗೆ ಇರುವುದಿಲ್ಲ.
  • ಸರಳ ಖರೀದಿ ವ್ಯವಸ್ಥೆ. ಪಾಸ್‌ಗಳನ್ನು ನಮ್ಮ ಮೆಟ್ರೋ ಅಧಿಕೃತ ಆಪ್ ಮೂಲಕ ಖರೀದಿಸಬಹುದು. ಇತರ ಮೊಬೈಲ್ ಆಪ್ಲಿಕೇಶನ್‌ಗಳಲ್ಲಿ ಶೀಘ್ರದಲ್ಲೇ ಪರಿಚಯಿಸಲಾಗುವುದು.
  • ಸ್ಪರ್ಶರಹಿತ ಪ್ರವೇಶ ಮತ್ತು ನಿರ್ಗಮನ. ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಪ್ರದರ್ಶಿಸಲಾದ QR ಕೋಡ್ ಅನ್ನು ಸ್ವಯಂಚಾಲಿತ ಸಂಗ್ರಹ ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡಿ ಪ್ರವೇಶ/ ನಿರ್ಗಮನ ಪಡೆಯಬಹುದು.

ಪಾಸುಗಳ ದರ

  • 1 ದಿನದ ಪಾಸ್. ಸ್ಮಾರ್ಟ್‌ ಕಾರ್ಡ್‌ ದರ (50 ರೂ. ಠೇವಣಿ ಸೇರಿ) 300 ರೂ.. ಮೊಬೈಲ್ ಕ್ಯುಆರ್ ಕೋಡ್ ಪಾಸು (ಠೇವಣಿ ಇಲ್ಲ) 250 ರೂ.ಗಳು. 1 ದಿನ ಅನಿಯಮಿತ ಪ್ರಯಾಣ.
  • 3 ದಿನಗಳ ಪಾಸ್. ಸ್ಮಾರ್ಟ್‌ ಕಾರ್ಡ್‌ ದರ (50 ರೂ. ಠೇವಣಿ ಸೇರಿ) 600 ರೂ.. ಮೊಬೈಲ್ ಕ್ಯುಆರ್ ಕೋಡ್ ಪಾಸು (ಠೇವಣಿ ಇಲ್ಲ) 550 ರೂ.ಗಳು. 3 ದಿನ ಅನಿಯಮಿತ ಪ್ರಯಾಣ.
  • 5 ದಿನಗಳ ಪಾಸ್. ಸ್ಮಾರ್ಟ್‌ ಕಾರ್ಡ್‌ ದರ (50 ರೂ. ಠೇವಣಿ ಸೇರಿ) 900 ರೂ.ಗಳು. ಮೊಬೈಲ್ ಕ್ಯುಆರ್ ಕೋಡ್ ಪಾಸು (ಠೇವಣಿ ಇಲ್ಲ) 850 ರೂ.ಗಳು. 5 ದಿನ ಅನಿಯಮಿತ ಪ್ರಯಾಣ.

ಬಿಎಂಆರ್‌ಸಿಎಲ್ ಪಯಾಣಿಕರ ಕಾರ್ಡ್ ವಿತರಣೆ ಮತ್ತು ಮರುಪಾವತಿಗಾಗಿ ಸರತಿ ಸಾಲುಗಳನ್ನು ತಪ್ಪಿಸಿ, ಸಮಯವನ್ನು ಉಳಿಸಲು ಮತ್ತು ತಡೆರಹಿತ ಪ್ರಯಾಣದ ಅನುಭವವನ್ನು ಹೆಚ್ಚಿಸಲು, ಮೊಬೈಲ್ QR-ಆಧಾರಿತ ಪಾಸ್‌ಗಳಿಗೆ ಬದಲಾಯಿಸಲು ಪ್ರೋತ್ಸಾಹಿಸುತ್ತದೆ.

ಈ ಉಪಕ್ರಮವು ಪೂರ್ಣ ಡಿಜಿಟಲ್ ಮತ್ತು ಪ್ರಯಾಣಿಕ ಸ್ನೇಹಿ ಮೆಟ್ರೋ ವ್ಯವಸ್ಥೆ ರೂಪಿಸುವ ಬಿಎಂಆರ್‌ಸಿಎಲ್‌ನ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular