HomeKarnatakaಮದ್ಯ ಸೇವನೆ ಹಿನ್ನಲೆ ಪ್ರಯಾಣಕ್ಕೆ ನಿರಾಕರಣೆ: ದೊಡ್ಡಕಲ್ಲಸಂದ್ರ ಘಟನೆ ಬಗ್ಗೆ BMRCL ಸ್ಪಷ್ಟನೆ

ಮದ್ಯ ಸೇವನೆ ಹಿನ್ನಲೆ ಪ್ರಯಾಣಕ್ಕೆ ನಿರಾಕರಣೆ: ದೊಡ್ಡಕಲ್ಲಸಂದ್ರ ಘಟನೆ ಬಗ್ಗೆ BMRCL ಸ್ಪಷ್ಟನೆ

ಬೆಂಗಳೂರು: ಬಿಎಂಆರ್‌ಸಿಎಲ್ ನಿಂದ ದೊಡ್ಡ ಕಲ್ಲಸಂದ್ರ ಘಟನೆ ಬಗ್ಗೆ ಸ್ಪಷ್ಟೀಕರಣ ನೀಡಲಾಗಿದೆ. ಮದ್ಯ ಸೇವಿಸಿ ಮೆಟ್ರೋದಲ್ಲಿ ಪ್ರಯಾಣಿಸಲು ವ್ಯಕ್ತಿಯೊಬ್ಬ ಮುಂದಾಗಿದ್ದ ವೇಳೆ ಮೆಟ್ರೋ ಭದ್ರತಾ ಸಿಬ್ಬಂದಿ ಆತನ ತಪಾಸಣೆ ಮಾಡಿದ್ದಾರೆ. ಮದ್ಯದ ವಾಸನೆ ಗಮನಿಸಿ ಮೆಟ್ರೋದಲ್ಲಿ ಪ್ರಯಾಣಿಸಿದಂತೆ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಸುದ್ದಿ ವೈರಲ್ ಆಗಿತ್ತು. ವ್ಯಕ್ತಿಯ ಬಟ್ಟೆ ಕೊಳಬೇಕಾಗಿತ್ತು. ಶರ್ಟು ಬಟನ್ ಹರಿದಿತ್ತು. ಬಟ್ಟೆಯ ಕಾರಣಕ್ಕೆ ನಿರಾಕರಿಸಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು.

ವ್ಯಕ್ತಿಯ ಬಟ್ಟೆ ಕೊಳಕು ಅಥವಾ ಶರ್ಟು ಬಟನ್ ಹರಿದಿರುವುದರಿಂದ ಆತನಿಗೆ ಪ್ರಯಾಣಿಸಲು ನಾವು ನಿರಾಕರಿಸಿಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟನೆ ನೀಡಿದೆ. ಮದ್ಯ ಸೇವನೆ ಹಿನ್ನೆಲೆ ಪ್ರಯಾಣಿಸಲು ನಿರಾಕರಿಸಿದ್ದಾಗಿ ಬಿಎಮ್ಆರ್‌ಸಿಎಲ್ ಸ್ಪಷ್ಟಪಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular