HomeKarnatakaಯುವತಿಯರ ಸೋಗಿನಲ್ಲಿ ಬೆತ್ತಲೆ ವಿಡಿಯೋ ಕರೆ; ನಿವೃತ್ತ ಸರ್ಕಾರಿ ನೌಕರರಿಬ್ಬರಿಗೆ 20.56 ಲಕ್ಷ ದೋಚಿದ ವಂಚಕರು

ಯುವತಿಯರ ಸೋಗಿನಲ್ಲಿ ಬೆತ್ತಲೆ ವಿಡಿಯೋ ಕರೆ; ನಿವೃತ್ತ ಸರ್ಕಾರಿ ನೌಕರರಿಬ್ಬರಿಗೆ 20.56 ಲಕ್ಷ ದೋಚಿದ ವಂಚಕರು

ಬೆಂಗಳೂರು: ನಿವೃತ್ತ ಸರ್ಕಾರಿ ನೌಕರರಿಬ್ಬರಿಗೆ ಯುವತಿಯರ ಸೋಗಿನಲ್ಲಿ ಕರೆ ಮಾಡಿದ ಸೈಬರ್ ವಂಚಕರು ಬ್ಲ್ಯಾಕ್ ಮೇಲ್ ಮಾಡಿ ಬೆದರಿಸಿ ಬರೋಬ್ಬರಿ 20.56 ಲಕ್ಷ ಹಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಎರಡು ಪ್ರಕರಣಗಳ ಸಂಬಮ್ಧ ಪಶ್ಚಿಮ ಹಾಗೂ ಉತ್ತರ ವಿಭಾಗ ಸೈಬರ್ ಕ್ರೈಂ ಠಾಣೆಗಳಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ. ಇಬ್ಬರು ನಿವೃತ್ತ ಸರ್ಕಾರಿ ನೌಕರರಿಗೆ ಹೊರ ರಾಜ್ಯದ ನಂಬರ್ ನಿಂದ ವಿಡಿಯೋ ಕಾಲ್ ಮಾಡಿರುವ ವಂಚಕರು ಯುವತಿಯ ನಗ್ನ ವಿಡಿಯೋ ಬಳಸಿಕೊಂಡು ಕರೆ ಮಾಡಿ, ಬಳಿಕ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಇಬ್ಬರೂ 20.56 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಪರಿಚಿತರ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular