ಕೂದಲುದುರುವ ಸಮಸ್ಯೆಗೆ ಒಳ್ಳೆ ಮದ್ದು ಕಪ್ಪು ಜೀರಿಗೆ ಎಣ್ಣೆ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗೆ ಹಲವು ಕಾರಣಗಳಿರಬಹುದು. ಆದರೆ ಈ ಸಮಸ್ಯೆಯನ್ನು ನಿವಾರಿಸಲು ಕಪ್ಪು ಬೀಜದ (ಕಪ್ಪು ಜೀರಿಗೆ)ಎಣ್ಣೆ ಪರಿಣಾಮಕಾರಿ ಮನೆ ಮದ್ದಾಗಿದೆ. ಅದನ್ನು ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

1 ಚಮಚ ನಿಂಬೆ ರಸ, 2 ಚಮಚ ಕಪ್ಪು ಬೀಜದ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ನೆತ್ತಿಗೆ ಹಚ್ಚಿ 10 ನಿಮಿಷಗಳ ಕಾಲ ಮಸಾಜ್ ಮಾಡಿ ಬಳಿಕ 15 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರದಲ್ಲಿ 1-2 ಬಾರಿ ಬಳಸಿ.

 1 ಚಮಚ ಕಪ್ಪು ಬೀಜದ ಎಣ್ಣೆಗೆ 1 ಚಮಚ ತೆಂಗಿನೆಣ್ಣೆ ಮಿಕ್ಸ್ ಮಾಡಿ ಬಿಸಿ ಮಾಡಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ 30 ನಿಮಿಷ ಬಿಟ್ಟು ಕೂದಲನ್ನು ಶಾಂಪೂ ಬಳಸಿ ವಾಶ್ ಮಾಡಿ. ಇದನ್ನು ವಾರದಲ್ಲಿ 2-3 ಬಾರಿ ಬಳಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read