HomeKarnatakaಜ.22 ರಂದು 'ಅಹಿತಕರ ಘಟನೆಗಳು' ನಡೆದ್ರೆ ಬಿ.ಕೆ ಹರಿಪ್ರಸಾದ್ ಕಾರಣ : ಮಾಜಿ ಸಿಎಂ ಸದಾನಂದಗೌಡ

ಜ.22 ರಂದು ‘ಅಹಿತಕರ ಘಟನೆಗಳು’ ನಡೆದ್ರೆ ಬಿ.ಕೆ ಹರಿಪ್ರಸಾದ್ ಕಾರಣ : ಮಾಜಿ ಸಿಎಂ ಸದಾನಂದಗೌಡ

ಬೆಂಗಳೂರು : ಜ.22 ರಂದು ಅಹಿತಕರ ಘಟನೆಗಳು ನಡೆದರೆ ಬಿ.ಕೆ ಹರಿಪ್ರಸಾದ್ ಕಾರಣ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾತನಾಡಿದ ಮಾಜಿ ಸಿಎಂ ಸದಾನಂದಗೌಡ ‘ಜ.22 ರಂದು ಅಹಿತಕರ ಘಟನೆಗಳು ನಡೆದರೆ ಬಿ.ಕೆ ಹರಿಪ್ರಸಾದ್ ಕಾರಣ, ಹರಿಪ್ರಸಾದ್ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ, ಈ ಸಂಬಂಧ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸುತ್ತೇವೆ . ಕೂಡಲೇ ಹರಿಪ್ರಸಾದ್ ಬಂಧನ ಆಗಬೇಕು, ಜವಾಬ್ದಾರಿ ಸ್ಥಾನದಲ್ಲಿರುವ ಹರಿಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಗುಜರಾತ್ ನ ಗೋಧ್ರಾ ದುರಂತ ರೀತಿ ಮತ್ತೊಮ್ಮೆ ಏನಾದ್ರೂ ಆಗಬಹುದು, ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ಕೊಡಬೇಕು. ರಾಮಮಂದಿರವನ್ನು ಧಾರ್ಮಿಕ ಗುರುಗಳು ಉದ್ಘಾಟನೆ ಮಾಡುತ್ತಿದ್ದರೆ ನಾವು ಆಹ್ವಾನ ಇಲ್ಲದೇ ಹೋಗುತ್ತಿದ್ದೇವು. ಆದರೆ ಇದು ರಾಜಕೀಯ ಕಾರ್ಯಕ್ರಮವಾಗಿದೆ ಎಂದು ಕಾಂಗ್ರೆಸ್ ಎಂಎಲ್ ಸಿ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ನಾಯಕರು ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular